ವಿಜಯಪುರ: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ, ದೇಶ ರಕ್ಷಕರ ಪಡೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಮೂಲ್ಯಳ ಪ್ರತಿಕೃತಿ ದಹಿಸಿ ಬೊಬ್ಬೆ ಹೊಡೆದು ಆಕ್ರೋಶ ಹೊರಹಾಕಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯವೆಸಗಿದ್ದಾಳೆ. ಭಾರತ ಮಾತೆ ಮಡಿಲಲ್ಲಿ ಜನಿಸಿ ಪಾಕ್ ಪರ ಜಯಘೋಷಣೆ ಹೇಳಿರುವುದು ವಿಷಾದನೀಯ. ದೇಶದ್ರೋಹಿ ಹೇಳಿಕೆಗಳ ಮೂಲಕ ಉದ್ಧಟತನ ಪ್ರದರ್ಶನ ಮಾಡಿದ್ದಾಳೆ. ಆದ ಕಾರಣ ಆಕೆಯನ್ನು ಈಗಾಗಲೇ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು ಆಕೆಯ ಮೇಲೆ ಅತಿ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಆಕೆಯನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಉಪಾಧ್ಯಕ್ಷ ಬಸವರಾಜ ಗಳವೆ ಮಾತನಾಡಿದರು. ಕಾನೂನು ಸಲಹೆಗಾರ ಉತ್ತಮ ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ರಾಜು ಬಿಸೆ, ಜಿಲ್ಲಾ ಕಾರ್ಯದರ್ಶಿ ಉಮೇಶ ರುದ್ರಮುನಿ, ರಾಜು ಕೋಟ್ಯಾಳ, ಕುಮಾರ ಮದಭಾವಿ, ಕುಮಾರ ಉಕ್ಕಲಿ, ರಾಜು ದಿಗಿನಾಳ, ಅಪ್ಪು ಅಂಬಿಗೇರ, ಮಲ್ಲು ಹೊಸಗೌಡರ, ಆಕಾಶ ಉಪ್ಪಾರ, ಜಿಶ್ಯಾದ ಬ್ಯಾಕೋಡ, ಕೃಷ್ಣಾ ಉಪ್ಪಾರ, ಕಾಶೀನಾಥ ಹಿಪಳೆ ಇದ್ದರು.
ದೇಶ ರಕ್ಷಕರ ಪಡೆ: ದೇಶ ವಿರೋಧಿ ಚಟುವಟಿಕೆ ಮತ್ತು ದೇಶ ವಿರೋಧಿ ಘೋಷಣೆ ಕೂಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ದೇಶ ರಕ್ಷಕರ ಪಡೆ, ಛತ್ರಪತಿ ಶಿವಾಜಿ ಫೌಂಡೇಶನ್, ಕರುನಾಡ ಯುವ ಪಡೆ, ಹಿಂದುಸ್ತಾನವಾಗಲಿ ಭಾರತ, ಚಂದ್ರಲಾಂಬಾ ಭಜನಾ ಮಂಡಳಿ, ಕರ್ನಾಟಕ ಯುವ ಜನ ಸೇನೆ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ದೇಶ ರಕ್ಷಕರ ಪಡೆಯ ರೋಹನ್ ಆಪ್ಟೆ ಮಾತನಾಡಿ, ಪಾಕಿಸ್ತಾನ ಪರ ಒಲವು ಹೊಂದಿದ ದೇಶದ್ರೋಹಿಗಳು ಯಾರೇ ಆಗಿರಲಿ, ನಮ್ಮ ಭಾರತ ಬಿಟ್ಟು ತೊಲಗಲು ಎಲ್ಲ ವ್ಯವಸ್ಥೆ ನಮ್ಮ ದೇಶ ರಕ್ಷಕರ ಪಡೆ ವತಿಯಿಂದ ಮಾಡಿಕೊಡಲಾಗುವುದು. ದೇಶದ್ರೋಹಿಗಳು ನಮ್ಮ ಭಾರತದಲ್ಲಿ ಇರಲು ಯೋಗ್ಯರಲ್ಲ. ಶತ್ರು ದೇಶದ ಪರ ಹೊಗಳುವವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಅವರಿಗೆ ಶೀಘ್ರವಾಗಿ ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಪುನೀತ್ ಕಾಂಬಳೆ, ಕರುನಾಡ ಯುವ ಪಡೆಯ ಸಿದ್ದು ಭಾವಿಕಟ್ಟಿ, ಛತ್ರಪತಿ ಶಿವಾಜಿ ಫೌಂಡೇಶನ್ ಕಿರಣ ಕಾಳೆ, ಆನಂದ ಕುಲಕರ್ಣಿ, ಚಂದ್ರಲಾಂಬಾ ಭಜನ ಮಂಡಳಿಯ ಜಯಶ್ರೀ ಕನ್ನೂರ, ಕವಿತಾ ಹಿರೇಮಠ, ಆದಿತ್ಯ ತಾವರಗೇರಿ, ರೋಹಿತ ಕೊಪ್ಪದ, ಪ್ರೇಮ ಕಲಕುಟಗಿ, ಕೃಷ್ಣಾ ಗುನ್ಹಾಳಕರ, ಅಮೀತ್ ದೇಸಾಯಿ, ರಮೇಶ ದರಸಂಗ, ಮಲ್ಲಿಕಾರ್ಜುನ ಕಾರಜೋಳ, ಶಿವರಾಜ್ ಬಿರಾದಾರ, ಹನುಮಂತ ತೇಲಿ, ಕಲ್ಪೇಶ ಅಳ್ಳಿ, ರಾಹುಲ್ ಪಾಟೀಲ, ಪವನ ಮಲಗೆ, ಸಿದ್ರಾಮ ತಾಂಬೆ, ಸಮೀರ ಕುಲಕರ್ಣಿ ಪಾಲ್ಗೊಂಡಿದ್ದರು.