Advertisement
ವಿಜಯಪುರ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ನಿಂದ ಭಾನುವಾರ ಸಂಜೆ ತಮ್ಮ ಮೇಲೆ ಹಲ್ಲೆ ನಡೆಸಿ ಕಾಲು ಮುರಿದಿದ್ದಾರೆ ಎಂದು ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ.
Related Articles
Advertisement
ಇದನ್ನೂ ಓದಿ :ಕಾಂಗ್ರೇಸ್ ಸಂಸದ ಡಿ.ಕೆ. ಸುರೇಶ್ ಗೂ ಕೋವಿಡ್ ಸೋಂಕು ದೃಢ!
ನಾನು ಮಾಜಿ ಕಾರ್ಪೋರೇಟರ್ ಎಂದು ತಿಳಿದು ಕೂಡ ಪೊಲೀಸರು ನನ್ನ ಮೇಲೆ ಮನಬಂದಂತೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದ್ದರಿಂದ ಕಾಲು ಮುರಿದಿದೆ ಎಂದು ದೂರಿದ್ದಾರೆ.
ಪೊಲೀಸರು ನನ್ನ ಮೇಲೆ ದಬ್ಬಾಳಿಕೆ ಮಾಡಿದ, ಕಾಲರ್ ಶರ್ಟ್ ಹಿಡಿದು ಗಾಂಧಿಚೌಕ್ ಠಾಣೆಗೆ ಎಳೆದುಕೊಂಡು ಹೋಗಿ, ಠಾಣೆಯಲ್ಲಿ ಕೂಡಿಹಾಕಿ ಹೊಡೆದಿದ್ದಾರೆ. ಪೊಲೀಸರು ಲಾಠಿಯಿಂದ ಕಾಲಿಗೆ ಮನಬಂದಂತೆ ಥಳಿಸಿದ್ದರಿಂದ ನನ್ನ ಕಾಲಿಗೆ ಭಾರಿ ಪೆಟ್ಟಾಗಿ ಮುರಿದಿದೆ. ನನ್ನ ಮೇಲೆ ಠಾಣೆಯಲ್ಲಿ ಜರುಗಿದ ದೌರ್ಜನ್ಯದ ಇಡೀ ಪ್ರಕರಣ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಫುಟೇಜ್ ಪರಿಶೀಲಿಸಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನನಗೆ ಕಾಲಿನ ರಕ್ತ ಸಂಚಲನ ಸ್ಥಗಿತವಾಗಿದೆ ಎಂದು ವೈದ್ಯರು ಎಂಆರ್ ಐ ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಜಲ್ ಅಗರ್ವಾಲ್! ಮದುವೆಗೆ ಡೇಟ್ ಫಿಕ್ಸ್
ಖಾಸಗಿ ಆಸ್ಪತ್ರೆಯಿಂದ MLC ಮಾಡಿಸಿ ವರದಿ ಠಾಣೆಗೂ ಕಳಿಸಿದ್ದೇನೆ. ಎಸ್ಪಿ ಅವರಿಗೆ ಮನವಿ ಕಳಿಸಿದ್ದರೂ ಪೊಲಿಸರು ತಪ್ಪಿತಸ್ತರ ಪೊಲೀಸರ ವಿರುದ್ಧ ಪ್ತಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿಲ್ಲ ಎಂದು ಥಳಿತಕ್ಕೊಳಗಾದ ಮಾಜಿ ಕಾರ್ಪೋರೇಟರ್ ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ.