Advertisement

ಪೆಡಲ್‌ ಸ್ಯಾನಿಟೈಸರ್‌ ಯಂತ್ರ ಹಸಾಂತರ

06:37 PM May 15, 2020 | Naveen |

ವಿಜಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿರುವ ಸ್ವದೇಶಿ, ಸ್ವಾವಲಂಬನೆ ಮಂತ್ರಕ್ಕೆ ಪೂರಕವಾಗಿ ವಿಜಯಪುರ ಜಿಲ್ಲೆಯಲ್ಲಿ ಅದಾಗಲೇ ಪೆಡಲ್‌ ಆಧಾರಿತ ಸ್ವದೇಶಿ ಸ್ಯಾನಿಟೈಸರ್‌ ಯಂತ್ರಗಳನ್ನು ಉತ್ಪಾದಿಸಲಾಗಿದೆ.

Advertisement

ನಗರದ ಬಿಎಲ್‌ಡಿಇ ಸಂಸ್ಥೆ ಸಂಗನಬಸವ ಸ್ವಾಮೀಜಿ ಪಾಲಿಟೆಕ್ನಿಕ್‌, ಪೆಡಲ್‌ ಆಧಾರಿತ ಸ್ಯಾನಿಟೈಸರ್‌ ಮೊಬೈಲ್‌ ಡಿಸ್ಪೆನ್ಸರಿ ಉತ್ಪಾದಿಸಿದ್ದು, ಸಂಸ್ಥೆ ಅಧ್ಯಕ್ಷರಾದ ಮಾಜಿ ಸಚಿವ ಎಂ.ಬಿ.ಪಾಟೀಲ ನಿರ್ದೇಶನದ ಮೇರೆಗೆ ಜಿಲ್ಲಾಧಿ ಕಾರಿ ವೈ. ಎಸ್‌.ಪಾಟೀಲ ಅವರ ಮೂಲಕ ಜಿಲ್ಲಾಡಳಿತಕ್ಕೆ 5 ಉಪಕರಣಗಳನ್ನು ಹಸ್ತಾಂತರಿಸಲಾಯಿತು.

ಪಿವಿಸಿ ಪೈಪ್‌ನಲ್ಲಿ ಚೌಕಟ್ಟು ತಯಾರಿಸಿ, ಮೇಲ್ಭಾಗದಲ್ಲಿ ಒಂದು ಲೀಟರ್‌ ಸ್ಯಾನಿಟೈಸರ್‌ ದ್ರಾವಣ ಹಿಡಿಯುವ ಸ್ಥಳ ಮಾಡಿದ್ದಾರೆ. ಕಾಲಿನಿಂದ ಒತ್ತಿದರೆ ಸ್ಯಾನಿಟೈಸರ್‌ ಹೊರಬರುವಂತೆ ರೂಪಿಸಿದ್ದು, ಸುಲಭವಾಗಿ ಬಳಸಲು ಸಾಧ್ಯವಿದೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ, ವಿನೂತನ ಉತ್ಪನ್ನ ತಯಾರಿಸಿರುವ ಬಿಎಲ್‌ ಡಿಇ ಪಾಲಿಟೆಕ್ನಿಕ್‌ ಕಾರ್ಯಕ್ಕೆ ಶ್ಲಾಘಿಸಿರುವ ಜಿಲ್ಲಾಧಿಕಾರಿ ವೈ.ಎಸ್‌ .ಪಾಟೀಲ, ನಮ್ಮ ಕಚೇರಿಗೆ ಬರುವ ಎಲ್ಲರೂ ಕಡ್ಡಾಯವಾಗಿ ಪೆಡಲ್‌ ಸ್ಯಾನಿಟೈಸರ್‌ ಡಿಸ್ಪೆನ್ಸರಿ ಬಳಸುವ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೂ ಮೊದಲು ಜಿಲ್ಲೆಗೆ ಗುರುವಾರ ರೈಲು ಮೂಲಕ ಬರುವ ಕಾರ್ಮಿಕರನ್ನು ಸ್ವಾಗತಿಸುವ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಇದನ್ನು ಬಳಸಲಾಗುತ್ತದೆ ಎಂದರು.

ಬಿಎಲ್‌ಡಿಇ ಆಡಳಿತಾ ಧಿಕಾರಿ ಡಾ| ರಾಘವೇಂದ್ರ ಕುಲಕರ್ಣಿ, ಡಾ| ಮಹಾಂತೇಶ ಬಿರಾದಾರ, ಡಾ| ಆರ್‌. ಬಿ.ಕೊಟ್ನಾಳ, ಪ್ರಾಚಾರ್ಯ ಎಸ್‌. ಜೆ.ಗೌಡರ, ಮೆಕ್ಯಾನಿಕಲ್‌ ವಿಭಾಗದ ಎ.ಎ. ಬಿರಾದಾರ, ಪಿ.ಬಿ.ಕಳಸಗೊಂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next