Advertisement

ಕೋವಿಡ್ ತಡೆಗೆ ಕ್ರಮ ಕೈಗೊಳ್ಳಿ

01:04 PM Apr 18, 2020 | Naveen |

ವಿಜಯಪುರ: ಕೋವಿಡ್‌ 19  ವಿರುದ್ಧದ ಹೋರಾಟದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಆತ್ಮಸ್ಥೈರ್ಯ ತುಂಬಲು ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಡಾ| ಎಂ.ಬಿ. ಪಾಟೀಲ ಅಧಿ ಕಾರಿಗಳೊಂದಿಗೆ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದು ಬೆಳೆ ಹಾನಿ ಸಂಭವಿಸಿದ ರೈತರ ಬೆಳೆ ನಷ್ಟ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಹಾರಾಷ್ಟ್ರದ ಗಡಿಯಲ್ಲಿರುವ ತಿಕೋಟಾ ತಾಲೂಕಿನ ಗಡಿ ಗ್ರಾಮಗಳಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್‌ಡೌನ್‌ ಸಂದರ್ಭದಲ್ಲಿ ಯಾರಿಗೂ ಆಹಾರ, ಧಾನ್ಯಗಳ ಕೊರತೆ ಆಗಬಾರದು. ಕ್ಷೇತ್ರದಲ್ಲಿ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಕೊರೊನಾ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು. ಸ್ಥಳೀಯ ಅಧಿಕಾರಿಗಳು, ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮೇಲಧಿಕಾರಿಗಳೊಂದಿಗೆ ಸ್ಥಳದಲ್ಲೇ ಮಾತನಾಡಿದರು. ಮಹಾರಾಷ್ಟ್ರ ಗಡಿಯಲ್ಲಿರುವ ತಿಕೋಟಾ ತಾಲೂಕಿನ ಕನಮಡಿ ಬಳಿಯ ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಅವರು, ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್‌ ಸ್ಕ್ಯಾನರ್‌ ಸೌಲಭ್ಯ ಇಲ್ಲದ ಕಾರಣ ಕೂಡಲೇ ಥರ್ಮಲ್‌ ಸ್ಕ್ಯಾನರ್‌ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಸೂಚಿಸಿದರು.

ನಂತರ ನಡೆದ ಸಭೆಯಲ್ಲಿ ತಿಕೋಟಾ ತಾಲೂಕಿನಲ್ಲಿ 600ಕ್ಕೂ ಮಿಕ್ಕಿ ಕುಟುಂಬಗಳಿಗೆ ರೇಷನ್‌ ಕಾರ್ಡ್‌ ರದ್ದಾಗಿ ಪಡಿತರ ಸಿಗುತ್ತಿಲ್ಲ
ಎಂಬ ಮಾಹಿತಿ ಸಿಗುತ್ತಲೇ ಗ್ರಾಮವಾರು ಪ್ರತಿ ಕುಟುಂಬದ ಮಾಹಿತಿ ಸಂಗ್ರಹಿಸಿ, ಪ್ರತಿ ಮನೆಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ಲಾಕ್‌ಡೌನ್‌ನಿಂದಾಗಿ ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕಾ ಉತ್ಪನ್ನಗಳು ಹಾಳಾಗಿದ್ದು ಈ ಕುರಿತು ತೋಟಗಾರಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ, ವಾಸ್ತವಿಕ ವರದಿ ದಾಖಲಿಸಬೇಕು. ಕೊರೊನಾ ಹಿನ್ನಲೆಯಲ್ಲಿ ರೈತರಿಗೆ ರಾತ್ರಿಗೆ ಬದಲಾಗಿ ಹಗಲು ವೇಳೆಯಲ್ಲಿ ವಿದ್ಯುತ್‌ ಸರಬರಾಜು ಮಾಡಬೇಕು. ಇದರಿಂದ ರೈತರು ಹಗಲಿನಲ್ಲೇ ಕೃಷಿ ಚಟುವಟಿಕೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ತಿಕೋಟಾ ತಾಲೂಕು ಹೆಚ್ಚಿನ ಪ್ರದೇಶ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು ಕರ್ನಾಟಕದ ಜನ ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದು, ಅವರು ಇದೇ ಪ್ರದೇಶಗಳಿಂದ ಮರಳಿ ಬರುವ ಸಾಧ್ಯತೆ ಹೆಚ್ಚಿದೆ. ಈ ಕಾರಣಕ್ಕೆ ಮುಖ್ಯ ರಸ್ತೆಗಳ್ಳಲ್ಲದೇ ಇತರೆ ಸಣ್ಣ-ಪುಟ್ಟ ರಸ್ತೆಗಳ ಮೇಲೂ ನಿಗಾ ವಹಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಿಕೋಟಾದಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಎಂ.ಬಿ. ಪಾಟೀಲ ಅವರು ದಿನವಿಡಿ ತಿಕೋಟಾ ತಾಲೂಕಿನಲ್ಲಿ ಸಂಚಾರ ಕೈಗೊಂಡು ಬಾಬಾನಗರ, ಬಿಜ್ಜರಗಿ, ಕನಮಡಿ, ಘೋಣಸಗಿ, ಕೆ.ಸಿದ್ದಾಪುರ, ಟಕ್ಕಳಕಿ, ಲೋಹಗಾಂವ, ಜಾಲಗೇರಿ, ಅರಕೇರಿ ಗ್ರಾಪಂಗಳಿಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿನ ಸವಿವರ ಮಾಹಿತಿ ಪಡೆದರು. ಲಾಕ್‌ಡೌನ್‌ ನಿಯಮಗಳನ್ನು ಕಟ್ಟು-ನಿಟ್ಟಾಗಿ ಪಾಲಿಸುಬೇಕು. ಕೃಷಿ ಉತ್ಪನ್ನ ಸೇರಿದಂತೆ ಯಾವುದೇ ಗೂಡ್ಸ್‌ ವಾಹನಗಳಿಗೆ ಸಂಚರಿಸಲು ಅಡಚಣೆ ಇಲ್ಲ. ಈ ಕುರಿತು ಮುಂಜಾಗ್ರತಾ ಕ್ರಮ ವಹಿಸಿ ಗೂಡ್ಸ್‌ ವಾಹನಗಳನ್ನು ಸಂಚರಿಸಬಹುದು. ಆದರೆ ಗ್ರಾಮಗಳಲ್ಲಿ ಅನವಶ್ಯಕವಾಗಿ ತಿರುಗಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next