Advertisement

Vijayapura; ನನ್ನ ಮುಖನೋಡಿ ಯಾರೂ ವೋಟ್ ಹಾಕಲ್ಲ, ಮೋದಿ ಮುಖ ನೋಡಿ ಹಾಕ್ತಾರೆ: ಜಿಗಜಿಣಗಿ

03:38 PM Apr 02, 2024 | keerthan |

ವಿಜಯಪುರ: ನನ್ನ ಮುಖ ನೋಡಿ ಯಾರೂ ವೋಟ್ ಹಾಕುದಿಲ್ಲ, ಮೋದಿ ಅವರ ಮುಖ ನೋಡಿ ವೋಟ್ ಹಾಕುತ್ತಾರೆ ಎಂದು ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಬಿಜೆಪಿ, ಜೆಡಿಎಸ್ ಜಿಲ್ಲಾಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಹಣದಲ್ಲಿ ವಿಜಯಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ.‌ ಹೀಗಾಗಿ ಮೋದಿ ಮುಖ ನೋಡಿ ವೋಟು ಹಾಕುತ್ತಾರೆ ಎಂದು ಮೋದಿ ಪ್ರಭಾವ ಬೀರುವಿಕೆಯನ್ನು ಸಮರ್ಥಿಸಿದರು.

ರಾಜ್ಯದಲ್ಲಿ ಪಾಪಿಸ್ಟ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದಿದ್ದರೆ ಕುಡಿಯುವ ನೀರಿಗೂ ತತ್ವಾರ. ಎರಡು ಮಳೆಗಳೂ ದೂರಾದವು ಎಂದು ವಾಗ್ದಾಳಿ ನಡೆಸಿದರು.

ನಾನು ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ ಗರಡಿಯಲ್ಲಿ ಪಳಗಿದವ. ಜನತಾ ಪರಿವಾರದಲ್ಲಿ ನಾನು ರಾಜಕೀಯ ನೆಲೆ ಕಂಡುಕೊಂಡಿದ್ದೇನೆ. ಹೀಗಾಗಿ ಹೊಸ ಮನೆಯಿಂದ ಹಳೆ ಮನೆಗೆ ಬಂದಿದ್ದೇನೆ. ಇದೀಗ ಜೆಡಿಎಸ್ ಮೈತ್ರಿಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.

ದೂರದೃಷ್ಟಿಯ ನಾಯಕ ಹೆಗಡೆ ಅವರು ತಮ್ಮ ಅಂತಿಮ ದಿನಗಳಲ್ಲಿ ಜನತಾ ಪರಿವಾರದ ನಾನು (ಹೆಗಡೆ) ಹಾಗೂ ದೇವೇಗೌಡ ಮಧ್ಯೆ ಹೊಂದಾಣಿಕೆ ಅಸಾಧ್ಯ. ಆದರೆ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ರಾಜಕೀಯವಾಗಿ ದೊಡ್ಡ ಭವಿಷ್ಯ ಇದೆ ಎಂದಿದ್ದರು. ಆದರೆ ಅವರು ಎಂದೂ ಬಿಜೆಪಿ ಸೇರುವಂತೆ ಹೇಳಲಿಲ್ಲ. ಆದರೆ ಹೆಗಡೆ ಅವರ ಕಾಲಾನಂತರ ನಾನೇ ಸ್ವಯಂ ಪ್ರೇರಿತವಾಗಿ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದೆ. ರಾಜಕೀಯ ದೂರದೃಷ್ಟಿಯ ನಾಯಕ ಹೆಗಡೆ ಅವರ ಭವಿಷ್ಯ ಈಗ ನಿಜವಾಗಿದೆ ಎಂದು ವಿವರಿಸಿದರು

Advertisement

ವಿಜಯಪುರ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ನಾನು ಬರೆದ ಪತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಸಚಿವರ ಸಂಪೂರ್ಣ ಸ್ಪಂದಸಿದ್ದಾರೆ.‌ ಕಾರಣ ವಿಜಯಪುರ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿದ್ದೇನೆ. ಇದರಿಂದಾಗಿ ಸಂಸತ್ ನಲ್ಲಿ ಪ್ರಶ್ನೆ ಕೇಳುವ ಪ್ರಮೇಯ ಬಂದಿಲ್ಲ ಎಂದು ತಮ್ಮನ್ನು ಸಮರ್ಥಸಿಕೊಂಡರು.

ಜನತಾ ಪರಿವಾರದ ಹಿನ್ನೆಲೆಯಿಂದ ಬಂದಿರುವ ನಾನು ಬಿಜೆಪಿ ಸೇರಿದ್ದರೂ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಸಮಾನವಾಗಿ ಕಂಡಿದ್ದೇನೆ. ಭವಿಷ್ಯದಲ್ಲೂ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾನವಾಗಿ ಒಗ್ಗೂಡಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಅರುಣ ಶಹಪುರ ಇತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next