Advertisement
ಪ್ರವಾಸೋದ್ಯಮ ಇಲಾಖೆಯಿಂದ ಪ್ರತಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕಾರುಕೊಂಡು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಯೋಜನೆಗಾಗಿ ಪ್ರವಾಸಿ ಟ್ಯಾಕ್ಸಿ ಕೊಳ್ಳಲು ರಿಯಾಯ್ತಿ ಹಾಗೂ ಬ್ಯಾಂಕ್ ಸಾಲ ಕೊಡಿಸುತ್ತದೆ. ಪ್ರತಿ ವರ್ಷ 40-50 ಕಾರುಗಳನ್ನು ವಿತರಿಸುತ್ತದೆ. ಹಿಂದೆಲ್ಲ ಇಲಾಖೆ ತಾನೇ ಮುಂದಾಗಿ ಎಸ್‌ಬಿಐ ಬ್ಯಾಂಕ್‌ನಿಂದ ಸಾಲ ಕೊಡಿಸಿ, 2 ಲಕ್ಷ ರೂ. ರಿಯಾಯ್ತಿ ಹಣದಲ್ಲಿ ಇಂಡಿಕಾ ಕಾರನ್ನು ಮಾತ್ರ ಕೊಡಿಸುತ್ತಿತ್ತು. ಆದರೆ ಕಳೆದ 2017ರಲ್ಲಿ ಹಲವು ನಿಯಮ ಬದಲಿಸಿದ್ದು, ಫಲಾನುಭವಿಗಳಿಗೆ 3 ಲಕ್ಷ ರೂ. ರಿಯಾಯ್ತಿ ಕೊಟ್ಟು, ಯಾವುದೇ ಬ್ಯಾಂಕ್‌ನಿಂದ ಯಾವುದೇ ಕಾರು ಕೊಳ್ಳಲು ಅವಕಾಶ ನೀಡಿದೆ. ಪರಿಶಿಷ್ಟ ಜಾತಿ-ಪಂಗಡಕ್ಕೆ ಮಾತ್ರ ಇದ್ದ ಈ ಸೌಲಭ್ಯವನ್ನು ಹಿಂದುಳಿದ ವರ್ಗಕ್ಕೂ ವಿಸ್ತರಿಸಿದೆ. ಈ ಹಿಂದೆ ರಾಜಕೀಯ-ಪ್ರಭಾವಿ ಫಲಾನುಭವಿಗಳಿಗೆ ಧಕ್ಕುತ್ತಿದ್ದ ಪ್ರವಾಸಿ ಕಾರುಗಳನ್ನು ಎಸ್‌ಎಸ್‌ಎಲ್ಸಿ ಅಂಕ ಹಾಗೂ ವಯೋಮಿತಿಯನ್ನು ಮಾನದಂಡ ಮಾಡಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
Related Articles
Advertisement
ಮತ್ತೂಂದೆ ಸರ್ಕಾರದ ಯೋಜನೆಗಳ ಫಲಾನುಭವಿಗಳು ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್‌ಗಳು ಹೊಸ ಫಲಾನುಭವಿಗಳಿಗೆ ಸಾಲ ನೀಡಲು ನಿರಾಕರಿಸುತ್ತಿವೆ. ಇದರೊಂದಿಗೆ ನಿರುದ್ಯೋಗ ನಿವಾರಣೆ, ಪ್ರವಾಸಿಗರ ಅನುಕೂಲ, ಸರ್ಕಾರದ ಸಹಾಯ ಧನ ಎಂಬೆಲ್ಲ ಹಲವು ದೂರಗಾಮಿ ಚಿಂತನೆಯ ಯೋಜನೆ ಉದ್ದೇಶ ಈಡೇರುವಲ್ಲಿ ವಿಫಲವಾಗಿದೆ.
ಪ್ರತಿ ವರ್ಷ ಪ್ರವಾಸಿ ಟ್ಯಾಕ್ಸಿ ಯೋಜನೆಯಲ್ಲಿ ಕಾರು ವಿತರಿಸುವ ಪ್ರವಾಸೋದ್ಯಮ ಇಲಾಖೆ ನಂತರ ಫಲಾನುಭವಿ ಏನಾದ ಎಂದು ತಿರುಗಿ ನೋಡುವುದಿಲ್ಲ. ಜಿಲ್ಲೆಗೆ ನಿತ್ಯ ಸಾವಿರಾರು ಪ್ರವಾಸಿಗರು ಬಂದರೂ ವಿಶ್ವಾಸಾರ್ಹ, ನಿಖರ ಹಾಗೂ ಸೂಕ್ತ ಪ್ರವಾಸಿ ಮಾಹಿತಿ ನೀಡುವ ನಿರ್ದಿಷ್ಟ ಹಾಗೂ ಪ್ರತ್ಯೇಕ ಟ್ಯಾಕ್ಸಿಗಳಿಗೆ ನಿಲ್ದಾಣ ಕಲ್ಪಿಸುವ ಗೋಜಿಗೂ ಹೋಗಿಲ್ಲ. ಪ್ರವಾಸಿ ಟ್ಯಾಕ್ಸಿ ಮಾಲೀಕರು ಅನುಭವಿಸುವ ಸಮಸ್ಯೆ ಆಲಿಸುವ ಸಣ್ಣ ಪ್ರಯತ್ನವೂ ಇಲಾಖೆಯಿಂದ ನಡೆದಿಲ್ಲ. ಏಕೆಂದರೆ ಪ್ರಭಾರಿಗಳ ಕಾರುಬಾರಿನಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಮೂಲ ವಾರಸುದಾರರೇ ಇಲ್ಲ.