ವಿಜಯಪುರ: ಜಿಲ್ಲೆಯಲ್ಲಿ ಮೇ.29 ರ ಸೋಮವಾರ ಸಂಜೆ ಕಾಣಿಸಿಕೊಂಡ ಸಿಡಿಲ ಅಬ್ಬರದ ಮಳೆಗೆ 20ಕ್ಕೂ ಹೆಚ್ಚು ಮೇಕೆಗಳು ಬಲಿಯಾದ ಘಟನೆ ವರದಿಯಾಗಿದೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಭಾಗಗಳಲ್ಲಿ ಸೋಮವಾರ ಮಧ್ಯಾಹ್ನದಿಂದ ಸಿಡಿಲು ಸಹಿತ ಮಳೆ ಆರಂಭವಾಗಿದೆ. ಈ ಸಮಯದಲ್ಲಿ ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಮೇಕೆಗಳು ಸಾವಿಗೀಡಾಗಿವೆ.
ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಕುರಿಗಾಹಿಗಳಾದ ಶಂಕರಪ್ಪ ವಾಲಿಕಾರ, ಪರಸಪ್ಪ ಚೌಡಕಿ ಎಂಬವರಿಗೆ ಸೇರಿದ ಮೇಕೆಗಳು ಎನ್ನಲಾಗಿದೆ. ಸಾವಿಗೀಡಾಗಿದ ಮೇಕೆಗಳನ್ನು ಕಳೆದುಕೊಂಡ ಅವರು ಕಂಗಾಲಾಗಿದ್ದಾರೆ.
ಸಿಡಿಲಿಗೆ ಬಲಿಯಾದ ಮೇಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮೇಕೆಗಳ ಮಾಲೀಕರು ಹಾಗೂ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.