Advertisement

ಏಕತೆಗೆ ಪಟೇಲ್‌ ಕೊಡುಗೆ ಅನನ್ಯ

11:57 AM Nov 01, 2019 | Naveen |

ವಿಜಯಪುರ: ಹಲವಾರು ಭಾಷೆಗಳನ್ನಾಡುವ ಜನರಿಂದ ಕೂಡಿರುವ ವಿವಿಧತೆಯನ್ನು ಹೊಂದಿರುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ಏಕತಾ ಭಾರತ ನಿರ್ಮಿಸಿದ ಸರದಾರ್‌ ವಲ್ಲಭಭಾಯಿ ಪಟೇಲ್‌ ಅವರ ಧೀರಶಕ್ತಿ ನಿಜಕ್ಕೂ ಅನುಕರಣೀಯ.

Advertisement

ವಿವಿಧತೆಯಲ್ಲಿ ಏಕತೆ ಕಟ್ಟಿ ಕೊಡುವಲ್ಲಿ ಪಟೇಲರ ಕೊಡುಗೆ ಅನನ್ಯ ಹಾಗೂ ಅದ್ಭುತ್‌ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ವಿಷ್ಣು ಶಿಂಧೆ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾದೇಶಿಕವಾಗಿ ಸಾಕಷ್ಟು ವ್ಯತ್ಯಾಸಗಳು, ಅನೇಕ ಭಿನ್ನಾಭಿಪ್ರಾಯಗಳನ್ನು ನಮ್ಮ ದೇಶದಲ್ಲಿ ಕಾಣುತ್ತೇವೆ. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ  ಧೀರ ಪುರುಷ, ಉಕ್ಕಿನ ಮನುಷ್ಯ ಎಂದು ಕರೆಯಿಸಿಕೊಳ್ಳುವ ಸರದಾರ್‌ ವಲ್ಲಭಾಯಿ ಪಟೇಲ್‌. ಅಂಥ ಮಹಾನ್‌ ಚೇತನದ ಜನ್ಮದಿನವನ್ನು 2014ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಎಲ್ಲೆಡೆ ಶಾಲಾ-ಕಾಲೇಜುಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಿಗೆ ಈ ದಿನದ ಮಹತ್ವ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಉದಯಕುಮಾರ ಕುಲಕರ್ಣಿ ಮಾತನಾಡಿ, ಏಕ ದೇಶ ಮಹಾನ್‌ ದೇಶ ಎಂಬ ಸಂದೇಶ ನೀಡಿದ ಸರದಾರ್‌ ವಲ್ಲಭಭಾಯಿ ಪಟೇಲ್‌ ಅವರು ರಾಷ್ಟ್ರದ ಏಕೀಕರಣದಲ್ಲಿ ಮಾಡಿದ ಕಾರ್ಯ ಅಷ್ಟಿಷ್ಟಲ್ಲ. ರಾಷ್ಟ್ರದ ಏಕೀಕರಣಕ್ಕಾಗಿ ತಮ್ಮದೇ ಕನಸುಗಳನ್ನು ಹೊಂದಿದ್ದ ಅವರು, ಹಗಲು ರಾತ್ರಿ ಏನ್ನದೇ ಹಠ ಬಿಡದೇ ರಾಷ್ಟ್ರದ
ಏಳ್ಗೆಗಾಗಿ ದುಡಿದಂತಹ ಮಹಾತ್ಮರು.

ಅಂತಹ ಏಕೀಕರಣದ ಮಹತ್ವವನ್ನು ಹಾಗೂ ಅವರ ಕೊಡುಗೆಯನ್ನು ಇಂದು ನಾವೆಲ್ಲರೂ ತಿಳಿಯಬೇಕಿದೆ ಮತ್ತು ದೇಶ
ಕಟ್ಟುವಲ್ಲಿ ಯುವಕರ ಪಾತ್ರ ತುಂಬಾ ಮುಖ್ಯವೆಂದು ತಿಳಿಸಿದರು.

Advertisement

ಪ್ರೊ | ಬಸವರಾಜ ಲಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಾ| ಅಶೋಕ ಸುರಪುರ ಮಾತನಾಡಿದರು. ಡಾ| ಪ್ರಕಾಶ ಬಡಿಗೇರ, ಪ್ರಕಾಶ ಸಣ್ಣಕ್ಕನವರ, ಡಾ| ಕಲಾವತಿ ಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next