Advertisement

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

09:01 PM May 18, 2024 | Team Udayavani |

ವಿಜಯಪುರ : ಇಕ್ಲಾಸಖಾನ್ ಮಸೀದಿ ಬಳಿಯ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ದಲಿತ ಸಂಘಟನೆಯ ಯುವಕರು ಕಾಮಗಾರಿ ನಡೆಸುವುದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗಿ ಸೃಷ್ಟಿಯಾದ ಗೊಂದಲ ನಿವಾರಣೆಗೆ ಪೊಲೀಸರ ಮಧ್ಯಸ್ಥಿಕೆ ವಹಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Advertisement

ಶನಿವಾರ ನಗರದ ಮನಗೂಳಿ ಅಗಸಿ ಬಳಿ ಮಸೀದಿ ಇದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖಾ ವ್ಯಾಪ್ತಿಯ ಸಂರಕ್ಷಿತ ವಲಯದಲ್ಲಿದೆ. ದಲಿತ ಸಂಘಟನೆಯ ಯುವಕರು ಇದೇ ಸ್ಥಳಕ್ಕೆ ಹೊಂದಿಕೊಂಡಂತೆ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದರು.ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಜನರು ಸಮದಾಯ ಭವನ ನಿರ್ಮಾಣಕ್ಕೆ ಆಕ್ಷೇಪಿಸಿದಾಗ, ಎರಡೂ ಸಮುದಾಯದ ಮುಖಂಡರು-ಯುವಕರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮೆಯಾಗಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ವಿಷಯ ತಿಳಿಯುತ್ತಲೇ ಗೋಲಗುಮ್ಮಟ ಪೊಲೀಸ್ ವೃತ್ತದ ಸಿಪಿಐ ಮಹಾಂತೇಶ ಮಠಪತಿ ಮತ್ತು ಸಿಬಂದಿಗಳು ಆಗಮಿಸಿ, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಿದರು. ಅಲ್ಲದೇ ಸ್ಥಳದ ಕುರಿತು ಎರಡೂ ಕಡೆಯವರನ್ನು ಸಮಾಧಾನಿಸಿ, ಸೂಕ್ತ ದಾಖಲಾತಿಗಳನ್ನು ತರುವಂತೆ ಮುಖಂಡರಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next