Advertisement
ಜೆಡಿಎಸ್ 6 ಸ್ಥಾನ ಪಡೆದಿದ್ದರೆ, ಕೇವಲ ಮೂರು ಸ್ಥಾನ ಪಡೆದಿರುವ ಬಿಜೆಪಿ ಧೂಳಿಪಟವಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಈ ಹಿಂದಿನ ಅವ ಧಿಯಲ್ಲಿ 10 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 1 ಸ್ಥಾನ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 8 ವಾರ್ಡ್‌ಗಳಲ್ಲಿ ಗೆದ್ದಿದ್ದ ಜೆಡಿಎಸ್ ಈ ಬಾರಿ 6 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಮೂಲಕ ತನ್ನ ಬಳಿ ಇದ್ದ ಎರಡು ಸ್ಥಾನ ಕಳೆದುಕೊಂಡಿದೆ. ಇನ್ನು ಕಳೆದ ಬಾರಿ 3 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿಯೂ ಆರಕ್ಕೇರದೇ 3ರಲ್ಲೇ ಗಿರಕಿ ಹೊಡೆದಿದೆ. ಇನ್ನು ಕಳೆದ ಬಾರಿ ಇಬ್ಬರಿದ್ದ ಪಕ್ಷೇತರರು ಈ ಬಾರಿ 3 ವಾರ್ಡ್‌ಗಳಲ್ಲಿ ಗೆದ್ದು ತಮ್ಮ ಸದಸ್ಯ ಬಲಕ್ಕೆ ಮತ್ತೂಬ್ಬರನ್ನು ಸೇರಿಸಿಕೊಂಡಿದೆ.
Related Articles
Advertisement
ಇನ್ನು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಇದ್ದು, ಮೇಲ್ಮನೆ ಶಾಸಕ ಅರುಣ ಶಹಾಪುರ ಅವರು ತವರು ನೆಲವಾದರೂ ಸಿಂದಗಿ ಪುರಸಭೆಯಂಥ ಸ್ಥಾನಿಕ ವ್ಯವಸ್ಥೆಯಲ್ಲಿ ಬಿಜೆಪಿ ಮೂರರಿಂದ ಮುಂದಡಿ ಇಡಲು ಸಾಧ್ಯವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿದ್ದರೂ ವಾರ್ಡ್‌ವಾರು ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಮುಖ ನೋಡಿ ಮೊಳ ಹಾಕಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಪುರಸಭೆ ಚುನಾವಣೆಯನ್ನು ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಗಂಭೀರವಾಗಿ ಪರಿಗಣಭಿಸದೇ ಇದ್ದುದು ಸಿಂದಗಿ ಪುರಸಭೆಯಲ್ಲಿ ತಾವರೆ ಮುದುಡಲು ಕಾರಣ ಎಂದು ಕಾರಣಗಳ ಪಟ್ಟಿ ಮಾಡಲಾಗುತ್ತಿದೆ.
ಶಾಸಕ ಎಂ.ಸಿ. ಮನಗೂಳಿ ಅವರ ಅತಿಯಾದ ಪುತ್ರ ವ್ಯಾಮೋಹವೇ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಛಿದ್ರವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎಂ.ಸಿ. ಮನಗೂಳಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಿಂತ ತಮ್ಮ ಪುತ್ರರನ್ನು ರಾಜಕೀಯವಾಗಿ ಬೆಳೆಸಬೇಕು ಎಂಬ ಹಂಬಲ ಹೊಂದಿದ್ದಾರೆ. ಇದುವೇ ಪಕ್ಷದ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಮುಗ್ಗರಿಸಲು ಕಾರಣ. ತಮ್ಮ ಮಗ ಅಶೋಕ ಅವರನ್ನು ಸಿಂದಗಿ ವಿಧಾನಸಭೆಗೆ ತಮ್ಮ ಉತ್ತರಾಧಿಕಾರಿ ಮಾಡಬೇಕು. ಇನ್ನೊಬ್ಬ ಮಗ ಡಾ| ಶಾಂತವೀರ ಮಲ್ಲಪ್ಪ ಮನಗೂಳಿ ಅವರನ್ನು ಪುರಸಭೆಗೆ ಗದ್ದುಗೆ ಏರಿಸಬೇಕು ಎಂಬ ವಿಪರೀತ ಕುಟುಂಬ ವ್ಯಾಮೋಹ ಶಾಸಕ ಮನಗೂಳಿ ಅವರಿಗೆ.
ಜಿ.ಎಸ್. ಕಮತರ