Advertisement

ಸಂಸದ ಜಿಗಜಿಣಗಿಗೆ ದೆಹಲಿ ಬುಲಾವ್, ಕೇಂದ್ರ ಸಚಿವ ಸ್ಥಾನದ ನಿರೀಕ್ಷೆ

03:22 PM Jul 06, 2021 | Team Udayavani |

ವಿಜಯಪುರ: ಕರ್ನಾಟಕ ರಾಜ್ಯದಲ್ಲೇ ಬಿಜೆಪಿ ಹಿರಿಯ ಸಂಸದರಾಗಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಕೇಂದ್ರದಿಂದ ದೆಹಲಿ ಬುಲಾವ್ ಬಂದಿದೆ‌.

Advertisement

ಮೋದಿ ಅವರ ಕೇಂದ್ರದ ಮೊದಲ ಅವಧಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ರಮೇಶ್ ಜಿಗಜಿಣಗಿ ಅವರಿಗೆ ಎರಡನೇ ಅವಧಿ ಸರ್ಕಾರ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ.

ಕೇಂದ್ರ ಸರ್ಕಾರದ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆದಿರುವ ಈ ಹಂತದಲ್ಲಿ ಕರ್ನಾಟಕದ ಹಲವು ಸಂಸದರಿಗೆ ಸಚಿವ ಸ್ಥಾನ ದಕ್ಕುವ ನಿರೀಕ್ಷೆ ಇದೆ.

ಇದಕ್ಕೆ ಪುಷ್ಟಿ ಎಂಬಂತೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಅವರಿಗೆ ದೆಹಲಿಗೆ ಬರುವಂತೆ ಕರೆ ನೀಡಲಾಗಿದೆ. ಇದು ಸಚಿವ ಸಂಪುಟ ‌ವಿಸ್ತರಣೆಯಲ್ಲಿ ಅವಕಾಶದ ನಿರೀಕ್ಷೆ ಹುಟ್ಟಿಸಿದೆ.

ತಮಗೆ ದೆಹಲಿಗೆ ಬರುವಂತೆ ಬುಲಾವ್ ಬಂದಿರವುದನ್ನು ಉದಯವಾಣಿ ಪತ್ರಿಕೆಗೆ ಖಚಿತ ಪಡಿಸಿರುವ ಜಿಗಜಿಣಗಿ, ಸಂಪುಟ ವಿಸ್ತರಣೆ, ಸಚಿವ ಸ್ಥಾನದ ಯಾವ ಮಾಹಿತಿಯನ್ನೂ ಹೈಕಮಾಂಡ್ ನನಗೆ ನೀಡಿಲ್ಲ. ದೆಹಲಿಗೆ ಬರುವಂತೆ ಮಾತ್ರ ಸೂಚಿಸಿದ್ದು, ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಸೂಚನೆಯನ್ನು ಪಾಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಇದನ್ನೂ ಓದಿ: 223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಯೋಜನೆ

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ಕ್ಷೇತ್ರ ಮರು ವಿಂಗಡನೆ ಬಳಿಕ ಪರಿಶಿಷ್ಟ ಜಾತಿಗೆ ಮೀಸಲಾದ ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಬಂದು ಮೂರು ಬಾರಿ ವಿಜಯ ಸಾಧಿಸಿದ್ದಾರೆ.

ಐದನೇ ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದಾಗ ಮೋದಿ ನೇತೃತ್ವದ ಮೊದಲ ಅವಧಿ ಸರ್ಕಾರದಲ್ಲಿ ಗ್ರಾಮೀಣ‌ ಕುಡಿಯುವ ನೀರು, ನೈರ್ಮಲ್ಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆರನೇ ಬಾರಿಗೆ ಸಂಸದರಾದರೂ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೂ ಜಿಗಜಿಣಗಿ ಅವರು ಅಸಮಾಧಾನ ಹೊರ ಹಾಕಿರಲಿಲ್ಲ.

ಪರಿಶಿಷ್ಟ ಜಾತಿ ಕೋಟಾದಲ್ಲಿ ಜಿಗಜಿಣಗಿ ಅವರು ಮತ್ತೊಮ್ಮೆ ಕೇಂದ್ರದಲ್ಲಿ ಸಚಿವರಾಗುವ ನಿರೀಕ್ಷೆ ಇದೆ. ಕರ್ನಾಟಕ ರಾಜ್ಯದಲ್ಲೂ ಜನತಾ ಪರಿವಾರದ ಸರ್ಕಾರದಲ್ಲಿ ಗ್ರಹ, ಕಂದಾಯ ಖಾತೆ ಸೇರಿದಂತೆ ಹಲವು ಖಾತೆ ನಿಭಾಯಿಸಿದ ಅನುಭವ ಸಂಸದ ರಮೇಶ್ ಜಿಗಜಿಣಗಿ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next