Advertisement

Vijayapura: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮಂಗ ಸಾವು

12:04 PM Aug 22, 2024 | Kavyashree |

ವಿಜಯಪುರ: ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮಂಗವೊಂದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಆ.22ರ ಗುರುವಾರ ನಡೆದಿದೆ.

Advertisement

ನಾಲತವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಾಂಪೌಂಡ್ ಬಳಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಂಗ ಮೃತಪಟ್ಟಿದೆ.

ಸಾರ್ವಜನಿಕರು ಮಂಗನನ್ನು ಅಲಂಕರಿಸಿ, ಪೂಜಿಸಿದರು. ನಂತರ ಅದ್ಧೂರಿಯಾಗಿ ಭಜರಂಗಿ ಹಾಡಿನೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮ‌ೂಲಕ ಸಾಗಿ ಗದ್ಯಮ ಕಟ್ಟಿ ಬಳಿ ಅಂತ್ಯಸಂಸ್ಕಾರ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next