ವಿಜಯಪುರ: ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ನೆಹರು ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಜಿಲ್ಲಾಡಳಿತ, ನಗರ ಪಾಲಿಕೆ ಜಂಟಿಯಾಗಿ ಅಕ್ರಮ ತೆರವು ಕಾರ್ಯಾಚರಣೆ ಆರಂಭಿಸಿವೆ. ಮತ್ತೊಂದೆಡೆ ತೆರವು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
ಗುರುವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ಯಂತ್ರದೊಂದಿಗೆ ಅಕ್ರಮ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು, ನೆಹರು ಮಾರುಕಟ್ಟೆ ರಸ್ತೆಯ ಮಧ್ಯದಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಅಂಗಡಿ, ಗೂಡಂಗಡಿ ತೆರವು ಕಾರ್ಯಾಚರಣೆಯಿಂದ ಬೀದಿಬದಿ ವ್ಯಾಪಾರಿಗಳು ಬೆಚ್ಚಿ ಬಿದ್ದರು.
ಸುಮಾರು 250 ಅಂಗಡಿ ಹಾಗೂ ಗೂಡಂಗಡಿಗಳ ತೆರವು ಮಾಡಿದರು.
ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಕಲಂ 144 ಪ್ರಕಾರ ನಿಷೇದಾಜ್ಞೆ ಜಾರಿ ಮಾಡಿದ್ದು, ಎಎಸ್ಪಿ, ಇಬ್ಬರು ಡಿಎಸ್ಪಿ, 6 ಇನ್ಸಪೆಕ್ಟರ್ ಗಳು,12 ಪಿಎಸೈ 120 ಪೊಲೀಸ್ ಪೇದೆಗಳು 4 ಡಿಎಆರ್ ವಾಹನ ನಿಯೋಜನೆ ಮಾಡಲಾಗಿತ್ತು.
ರಸ್ತೆ ತೆರವು ಕಾರ್ಯಾಚರಣೆ ಯಿಂದ ಕಂಗಾಲಾದ ಬೀದಿ ಬದಿ ವ್ಯಾಪಾರಿಗಳು, ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.
ತರಕಾರಿ, ಹಣ್ಣು, ಹೂ, ಇತರೆ ವಸ್ತುಗಳನ್ನು ಮಾರಾಟ ಮಾಡುವ ಮಹಿಳೆಯರು ಹಾಗೂ ಪುರುಷರು ತೆರವಿಗೆ ವಿರೋಧ ವ್ಯಕ್ತಪಡಿಸಿ, ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದರು.