ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿ ವಿಜಯಪುರದಿಂದ ಸಮುದ್ರ ನಗರಿ ಮಂಗಳೂರಿಗೆ ಓಡುತ್ತಿದ್ದ ರೈಲು ಪುನಾರಂಭಗೊಂಡಿದೆ. ಇದರಿಂದ ರೈಲು ಪ್ರಯಾಣ ಪ್ರಿಯರಲ್ಲಿ ಸಂತಸ ಮೂಡಿದೆ.
ಇದರಿಂದ ಕಿತ್ತೂರು ಕರ್ನಾಟಕದಿಂದ ಕರಾವಳಿ ಕರ್ನಾಟಕ ಭಾಗದ ಮಧ್ಯೆ ಮಹತ್ವದ ಸಾರಿಗೆ ಸಂಪರ್ಕ ಸಾಧ್ಯವಾಗಿದೆ.
ಕರ್ನಾಟಕದ ಸುರೇಶ ಅಂಗಡಿ ಅವರು ರೈಲ್ವೇ ಸಚಿವರಾಗಿದ್ದಾಗ ವಿಜಯಪುರ ರೈಲು ನಿಲ್ದಾಣದಲ್ಲಿ ಮಂಗಳೂರು ನಗರಕ್ಕೆ ನಿತ್ತವೂ ಓಡುವ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿತ್ತು.
ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಸದರಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಡಿ.1 ರಿಂದ ಮತ್ತೆ ವಿಜಯಪುರ ನಗರದಿಂದ ಮಂಗಳೂರಿಗೆ ರೈಲು ಸಂಚಾರ ಪುನಾರಂಭಗೊಂಡಿದೆ.
ಮಂಗಳೂರು ರೈಲು ಮತ್ತೆ ಓಡಾಟ ಆರಂಭಿಸಿದ್ದು, ನಮ್ಮ ಭಾಗದ ರೈಲು ಸಂಚಾರ ಪ್ರಿಯರಿಗೆ ಸಂತಸವಾಗಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಮಗಳ ನಿರ್ಬಂಧವಿದೆ. ಹೀಗಾಗಿ ರೈಲು ಪುನಾರಂಭದ ಸಂಭ್ರಮ ಆಚರಿಸಿಲ್ಲ ಎಂದು ವಿಜಯಪುರ ರೈಲ್ವೇ ಹೋರಾಟ ಸಮೀತಿಯ ಅಧ್ಯಕ್ಷ ಸತೀಶ ಭಾವಿ ತಿಳಿಸಿದ್ದಾರೆ.
ಇದನ್ನೂ ಓದಿ : ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ