Advertisement

ಜೂನ ಅಂತ್ಯದವರೆಗೆ ಮಲೇರಿಯಾ ಮಾಸಾಚರಣೆ

06:14 PM Jun 11, 2020 | Naveen |

ವಿಜಯಪುರ: ಜಿಲ್ಲೆಯನ್ನು ಮಲೇರಿಯಾ ಮುಕ್ತವನ್ನಾಗಿ ಮಾಡಲು ಸಮುದಾಯದ ಸಹಕಾರ ಮತ್ತು ಸಹಬಾಗಿತ್ವದೊಂದಿಗೆ ಅನಾಫಿಲೀಸ್‌ ಎಂಬ ಹೆಣ್ಣು ಸೊಳ್ಳೆ ನಿಯಂತ್ರಣದ ಬಗ್ಗೆ ಜೂನ್‌ 1 ರಿಂದ 30ರ ವರೆಗೆ ಮಲೇರಿಯಾ ಮಾಸಾಚಾರಣೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ಯಾವುದೇ ಜ್ವರ ಮಲೇರಿಯಾ ಇರಬಹುದು, ಜ್ವರ ಬಂದ ಎಲ್ಲ ವ್ಯಕ್ತಿಗಳನ್ನು ಗುರುತಿಸಿ ರಕ್ತ ಪರೀಕ್ಷೆಗೆ ಒಳಪಡಿಸಬೇಕು.

Advertisement

ಮಲೇರಿಯಾ ದೃಢಪಟ್ಟಲ್ಲಿ ತೀವ್ರ ಚಿಕಿತ್ಸೆ ನೀಡಬೇಕು. ಸಂಗ್ರಹಿಸಿದ 24ಗಂಟೆ ಒಳಗೆ ಪರೀಕ್ಷಾ ಫಲಿತಾಂಶ ಆಯಾ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಖಚಿತಪಡಿಸಿಕೊಳ್ಳಬಹುದು. ಈ ರೋಗದ ಲಕ್ಷಣಗಳಾದ ಚಳಿ ಮತ್ತು ನಡುಕದ ಜತೆ ಜ್ವರ, ಚಳಿಯ ನಂತರದ ವಿಪರೀತ ಜ್ವರ, ವಾಂತಿ, ತಲೆನೋವು, ಜ್ವರ ಕಡಿಮೆಯಾಗುವ ಸಮಯದಲ್ಲಿ ಬೆವರುವುದು, ಜ್ವರ ಕಡಿಮೆಯಾದ ನಂತರ ಸುಸ್ತು, ನಿಶ್ಯಕ್ತಿ ಆಗುತ್ತದೆ. ಮಲೇರಿಯ ಹೊಂದಿರುವ ವ್ಯಕ್ತಿಯನ್ನು ಹೆಣ್ಣು ಅನಾಪಿಲಿಸ್‌ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ 14 ದಿನದೊಳಗೆ ರೋಗವು ಮನುಷ್ಯನಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಲು ಪ್ರಾರಂಭವಾಗುತ್ತದೆ. ಶಂಕಿತ ಪ್ರಕರಣ ಕಂಡುಬಂದಲ್ಲಿ ನಿಯಂತ್ರಣಕ್ಕೆ ವಯಸ್ಸಿಗನುಗುಣವಾಗಿ ಕ್ಲೋರೋಕ್ವಿನ್‌ ಮಾತ್ರೆಗಳನ್ನು ನೀಡುತ್ತಾರೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳ ಜ್ವರ ಚಿಕಿತ್ಸಾ ಕೇಂದ್ರಗಳಲ್ಲೂ ಸಹ ರಕ್ತ ಲೇಪನಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು.

ನಂತರ ರಕ್ತ ಲೇಪನ ಪರೀಕ್ಷೆಯಿಂದ ಮಲೇರಿಯಾ ರೋಗವೆಂದು ದೃಢಪಟ್ಟಲ್ಲಿ ರೋಗಗಳಿಗೆ ತೀವ್ರ ಚಿಕಿತ್ಸೆಯನ್ನು ವಯಸ್ಸಿಗನುಗುಣವಾಗಿ ಕ್ಲೋರೋಕ್ವಿನ್‌ ಮತ್ತು ಪ್ರಿಮೋಕ್ವಿನ್‌ ಗುಳಿಗೆಗಳನ್ನು ನೀಡಲಾಗುತ್ತದೆ. ಈ ಗುಳಿಗೆಗಳು ಎಲ್ಲ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತೆಯರಲ್ಲಿ ಉಚಿತವಾಗಿ ದೊರೆಯುತ್ತದೆ. ಮಲೇರಿಯಾ ರೋಗ ಸೋಂಕಿತ ಹೆಣ್ಣು ಆನಾಪಿಲಿಸ್‌ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ ಅತಿ ಮುಖ್ಯವಾಗಿರುತ್ತದೆ. ಇವುಗಳ ನಿಯಂತ್ರಣಕ್ಕೆ ಒಳಾಂಗಣ ಕೀಟನಾಶಕ ಸಿಂಪಡಣೆ, ಧೂಮೀಕರಣ ಲಾರ್ವಾನಾಶಕ ಕೀಟನಾಶಕಗಳ ಬಳಕೆ ಮುಂತಾದವುಗಳನ್ನು ಶಿಪಾರಸ್ಸು ಮಾಡಲಾಗುತ್ತದೆ. ಲಾರ್ವಾ ನಾಶಕ್ಕಾಗಿ ಜೈವಿಕ ಕ್ರಮವಾಗಿ ಲಾರ್ವಾಹಾನಿ ಮೀನು ಮತ್ತು ಬ್ಯಾಕ್ಟೀರಿಯಗಳನ್ನು ಅಭಿವೃದ್ಧಿ ಪಡಿಸಿ ರೋಗವಾಹಕಗಳ ನಿಯಂತ್ರಣ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next