Advertisement
ಬುಧವಾರ ಜಿಲ್ಲಾಡಳಿತ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಬಿಎಲ್ಡಿಇ ಸಂಸ್ಥೆಯ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಧುರಚನ್ನರ 116ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಹಲಸಂಗಿ ಗೆಳೆಯರು ಕುಗ್ರಾಮದಲ್ಲಿದ್ದರೂ ತಮ್ಮ ಸಾಹಿತ್ಯ ಚಿಂತನೆಗಳ ಶ್ರೀಮಂತಿಕೆಯಿಂದ ನಾಡಿನ ಜನರ ಪ್ರೀತಿ ಸಂಪಾದಿಸಿದ್ದರು. ಮಧುರ ಚನ್ನರ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯ ಚಿಂತನೆಗಳು ಜೀವನದಲ್ಲಿ ಬದುಕಿರುವ ಉದ್ದೇಶವನ್ನು ತಿಳಿಸುತ್ತದೆ. ಇಂದಿನ ಯುವ ಪೀಳಿಗೆ ಇಂತಹ ಮಹಾನ್ ವ್ಯಕಿಗಳ ಸಾಹಿತ್ಯವನ್ನು ಅಭ್ಯಸಿಸಬೇಕು, ಸಾಹಿತ್ಯ ಕೃಷಿಯಲ್ಲಿ ತೊಡಗಬೇಕು ಎಂದು ಹೇಳಿದರು.
Related Articles
Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್. ಮದಭಾವಿ, ಹಲಸಂಗಿ ಗೆಳೆಯರ ಬಳಗವು ರಾಜ್ಯದಲ್ಲಿ ಹೆಚ್ಚು ಹೆಸರುವಾಸಿಯಾಗುವಂತಹ ಬಳಗವಾಗಿದೆ. ಸಿಂಪಿ ಲಿಂಗಣ್ಣ, ಮಧುರಚನ್ನ ಮುಂತಾದವರು ಸಾಹಿತ್ಯ ಸಂಸ್ಕೃತಿ ಕಲೆಯ ಪ್ರೇಮವನ್ನು ಕರಗತ ಮಾಡಿಕೊಂಡಿದ್ದರು. ಹಲಸಂಗಿ ಗೆಳೆಯರ ಜೀವಿತಾವಧಿ ಅಲ್ಪವಿದ್ದರೂ ಎಂದಿಗೂ ಮರೆಯದಂತಹ ಸನ್ಮಾರ್ಗ ತೋರಿಸುವಂತಹ ಸಾಹಿತ್ಯ ಉಳುಮೆ ಮಾಡಿದ್ದಾರೆ ಹಾಗೂ ಗದ್ಯಭಾಗಕ್ಕೆ ಹೊಸರೂಪ ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ವಿದ್ವಾಂಸರನ್ನು ಕರೆಸಿ, ಚಿಂತನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಕಾವ್ಯ, ಸಾಹಿತ್ಯ, ಜಾನಪದ ಕಲೆ, ಸಂಸ್ಕೃತಿ ಉಳುವಿಗಾಗಿ ಶ್ರಮಿಸುತ್ತಿರುವವರಿಗೆ 50 ಸಾವಿರ ರೂ.ಗಳನ್ನು ಹಲಸಂಗಿ ಗೆಳೆಯರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ವಿತರಿಸಲಾಗುತ್ತದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಮಾತನಾಡಿದರು. ಸಹಕಾರಿ ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಬಿ.ಆರ್. ಬನಸೋಡೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ವಿದ್ಯಾವತಿ ಅಂಕಲಗಿ, ಬಿ.ಸಿ. ಹತ್ತಿ, ದ್ರಾಕ್ಷಾಯಿಣಿ ಹುಡೇದ ಇದ್ದರು.
ಹಲಸಂಗಿ ಪ್ರತಿಷ್ಠಾನದ ಸಂಚಾಲಕ ದೊಡ್ಡಣ್ಣ ಭಜಂತ್ರಿ ಸ್ವಾಗತಿಸಿದರು. ಸಿಂಪಿ ನಿರೂಪಿಸಿದರು. ಸೋಮಶೇಖರ ವಾಲಿ ವಂದಿಸಿದರು.