Advertisement

ಸುನಿತಾ ಪರ ಜೆಡಿಎಸ್‌-ಕಾಂಗ್ರೆಸ್‌ ಜಂಟಿ ಪ್ರಚಾರ

04:48 PM Apr 11, 2019 | Naveen |

ವಿಜಯಪುರ: ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮೈತ್ರಿಯ ಜೆಡಿಎಸ್‌ ಅಭ್ಯರ್ಥಿ ಡಾ| ಸುನಿತಾ ಚವ್ಹಾಣ ಗೆಲುವು ಖಚಿತವಾಗಿದೆ. ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಒಗಟ್ಟಿನಿಂದ ಶ್ರಮಿಸಿದರೆ ಕೇಂದ್ರ ಸಚಿವ ಜಿಗಜಿಣಗಿ ಅವರನ್ನು ಸೋಲಿಸುವ ಜೊತೆಗೆ ಬಿಜೆಪಿ ಹಿಡಿತ ತಪ್ಪಿಸಲು ಕೂಡ ಸಾಧ್ಯ ಎಂದು ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ, ಮೆಲ್ಮನೆ ಸದಸ್ಯ ಪ್ರಕಾಶ ರಾಠೊಡ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬುಧವಾರ ನಗರದಲ್ಲಿ ಹಕೀಂ ಚೌಕ್‌ ವೃತ್ತದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು, ಈ ಬಾರಿ ಮೈತ್ರಿ ಪಕ್ಷದ ಅಭ್ಯರ್ಥಿ ಡಾ| ಸುನಿತಾ
ಚವ್ಹಾಣ ಅವರ ಗೆಲುವು ಖಚಿತ. ಹೀಗಾಗಿ ಎರಡೂ ಪಕ್ಷಗಳ ಮುಖಂಡರು,
ಕಾರ್ಯಕರ್ತರು, ಅಭಿಮಾನಿಗಳು ಒಗ್ಗಟ್ಟಾಗಿ ಮನೆ-ಮನೆಗಳಿಗೆ ತೆರಳಿ ಹಿಂದಿನ ಯುಪಿಎ ಸರಕಾರ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬಡವರ
ಕಲ್ಯಾಣಕ್ಕಾಗಿ ರೂಪಿಸಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೀಡಿದ ಹಲವು ಭಾಗ್ಯ ಯೋಜನೆಗಳು ಈಗಲೂ ಜಾರಿಯಲ್ಲಿದ್ದು, ಜನಮಾನಸದಲ್ಲಿವೆ. ಈ ಕುರಿತು ಜನರಿಗೆ ಪುನರ್‌ ಮನನ ಮಾಡುವ
ಕೆಲಸವಾಗಬೇಕು. ಜೊತೆಗೆ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಡವರಿಗಾಗಿ ಮಾಸಿಕ 6 ಸಾವಿರ ರೂ.
ಬಡವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ನೀಡಲು ಯೋಜಿಸಿರುವುದು. ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡುವುದಕ್ಕಾಗಿ ಮೈತ್ರಿ ಅಭ್ಯರ್ಥಿ ಸುನಿತಾ ಚವ್ಹಾಣ ಅವರನ್ನು ಗೆಲ್ಲಿಸುವುದು ಅಗತ್ಯವಾಗಿದೆ ಎಂದರು.

ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಸುನಿತಾ ಚವ್ಹಾಣ ಮಾತನಾಡಿ, ಮಹಿಳೆಯರ ಪರವಾಗಿ ಧ್ವನಿಯಾಗಲು ನನ್ನನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳಿಸಿದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಶ್ರಮಿಸುವುದಾಗಿ ಭರವಸೆ
ನೀಡಿದರು.

ಎಂ.ಎಲ್‌. ಶಾಂತಗಿರಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಅಬ್ದುಲ್‌ ಹಮೀದ್‌ ಮುಶ್ರೀಫ್, ಅಜೀತ್‌ಸಿಂಗ್‌ ಪರದೇಶಿ, ಚಾಂದಸಾಬ ಗಡಗಲಾವ, ಎಂ.ಎಂ. ಸುತಾರ, ಜಮೀರ್‌ ಅಹ್ಮದ್‌ ಭಕ್ಷಿ, ಆರತಿ ಶಹಾಪುರ, ಹೈದರ್‌ ನದಾಫ್‌, ಅಜಾದ್‌ ಪಟೇಲ್‌, ಗಂಗಾಧರ ಸಂಬಣ್ಣಿ, ಜಮೀರ್‌ ಅಹ್ಮದ್‌ ಬಾಗಲಕೋಟ, ಮಹಾದೇವಿ ಗೋಕಾಕ, ಅಬ್ದುಲ್‌ ಖಾದರ್‌ ಖಾದೀಮ್‌, ಸಾಹೇಬಗೌಡ ಬಿರಾದಾರ, ಇರ್ಫಾನ್‌ ಶೇಖ, ಮಲ್ಲು ತೊರವಿ, ಮಹಾನಗರ ಪಾಲಿಕೆಯ ಸದಸ್ಯರುಗಳಾದ ಮೈನುದ್ದೀನ್‌ ಬೀಳಗಿ, ಜಮೀರ್‌ ಬಾಂಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next