Advertisement

21ರಂದು ಬಿಎಸ್‌ವೈ ರೋಡ್‌ ಶೋ

12:59 PM Apr 18, 2019 | Naveen |

ಸಿಂದಗಿ: ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತಯಾಚನೆ ಮಾಡಲು ಪಟ್ಟಣದಲ್ಲಿ ಏ. 21ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ಮಾಡಲಿದ್ದಾರೆ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಬುಧವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಪಟ್ಟಣದ ಮೋರಟಗಿ ರಸ್ತೆಯಲ್ಲಿನ ನೂಲಿಯ ಚಂದಯ್ಯ ವೃತ್ತದಿಂದ ಟಿಪ್ಪು ಸುಲ್ತಾನ್‌ ಮಾರ್ಗವಾಗಿ ಡಾ| ಅಂಬೇಡ್ಕರ್‌ ವೃತ್ತದವರೆಗೆ ರೋಡ್‌ ಶೋ ಮಾಡಿ ಮತಯಾಚನೆ ಮಾಡಿ
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಅಧಿಕ ಜನ ಸೇರುವರು. ಏ. 18ರಂದು ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ವಿಜಯಪುರ ಮೀಸಲು ಕ್ಷೇತ್ರದಿಂದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ದಾಖಲೆ ಗೆಲುವು ಖಚಿತ. ಈ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಎದುರಿಸುತ್ತಿದ್ದೇವೆ. ಕ್ಷೇತ್ರದಲ್ಲಿ 5 ತಂಡಗಳ ಜೊತೆಗೆ
ಮಹಿಳಾ ಒಂದು ತಂಡ ಎಲ್ಲ ಗ್ರಾಮಗಳಿಗೆ ಹೋಗಿ ಅಲ್ಲಿ ಜನರಿಗೆ ಸ್ಪಂ ದಿಸಿ ಮತಯಾಚನೆ ಮಾಡುತ್ತಿದೆ ಎಂದರು.

ನರೇಂದ್ರ ಮೋದಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಕಡು ಬಡವರಿಗೆ, ಜನ ಸಾಮಾನ್ಯರಿಗೆ ಸಾಕಷ್ಟು ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. 10 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್‌, ಒಲೆಗಳನ್ನು ಉಚಿತವಾಗಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆಗಾಗಿ ಕೈಕೊಂಡ ಕಾರ್ಯಗಳು, ಕೇಂದ್ರ ಸಚಿವರಾಗಿ ರಮೇಶ ಜಿಗಜಿಣಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕರಪತ್ರ ವಿತರಿಸಿ ಮತಯಾಚನೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರದ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ಸಿಗುತ್ತದೆ. ಈ ಚುನಾಚಣೆಯಲ್ಲಿ 2 ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಚುನಾಯುತರಾಗುವುದು ಶತಸಿದ್ಧ. 6ನೇ ಬಾರಿಗೆ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸೋಣ ಮತ್ತೆ ದೇಶದ ಪ್ರಧಾನಿಯನ್ನಾಗಿ ನರೇಂದ್ರ
ಮೋದಿ ಅವರನ್ನು ಮಾಡೋಣ ಎಂದರು.

Advertisement

ಬಿಜೆಪಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತಯಾಚನೇ ಮಾಡುತ್ತಾರೆ ಎಂದು ವಿರೋಧ ಪಕ್ಷದವರು ಟೀಕಿಸುತ್ತಾರೆ. ನಾವು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುತ್ತೇವೆ. ಹಾಗೆಯೆ ನೀವು ಕೂಡಾ ಮಾಜಿ
ಪ್ರಧಾನಿ ಮನಮೋಹನ ಸಿಂಗ್‌ ಅವರ ಹೆಸರಿನಲ್ಲಿ ಮತಯಾಚನೆ ಮಾಡಿ ಎಂದು ಕಾಂಗ್ರೇಸ್‌ ಪಕ್ಷದವರಿಗೆ ಸವಾಲು ಹಾಕಿದರು.

ರಾಜು ಮಗಿಮಠ, ಅಶೋಕ ಅಲ್ಲಾಪುರ, ಮಲ್ಲಿಕಾರ್ಜುನ ಜೋಗುರ, ರಾಜಶೇಖರ ಪೂಜಾರಿ, ಸಿದ್ದು ಭಟಂನೂರ, ಈರಣ್ಣ ರಾವೂರ, ಬಿ.ಎಚ್‌. ಬಿರಾದಾರ, ಎಂ.ಎನ್‌. ಕಿರಣರಾಜ್‌, ಶ್ರೀಕಾಂತ
ಸೋಮಜಾಳ, ಬಸವರಾಜ ಸಜ್ಜನ, ಗುರು ತಳವಾರ, ಗುರು ಅಗಸರ, ಸಿದ್ದಲಿಂಗಯ್ಯ ಹಿರೇಮಠ, ನಿಂಗು ಬಗಲಿ, ಪ್ರಕಾಶ ದಸ್ಮಾ, ಚಂದ್ರಶೇಖರ ಅಮಲಿಹಾಳ, ಪ್ರಕಾಶ ನಂದಿಕೋಲ, ಮಲ್ಲು ಪೂಜಾರಿ, ಇಮಾಮಸಾಬ ನದಾಫ್‌, ಸಿದ್ರಾಯ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next