Advertisement
‘ವಿಜಯಪುರ ಮಾರುಕಟ್ಟೆಯಲ್ಲಿ ಕಾರ್ಮಿಕರು ಸಿಗುತ್ತಾರೆ’ ಶೀರ್ಷಿಕೆಯಲ್ಲಿ ‘ಉದಯವಾಣಿ’ ಮೇ 13ರಂದು ವಿಶೇಷ ವರದಿಗೆ ಪ್ರಕಟಿಸಿದ ಬೆನ್ನಲ್ಲೇ ಸ್ಪಂದನೆ ದೊರೆತಿದೆ. ವರದಿ ಪ್ರಕಟವಾಗುತ್ತಲೇ ಎಚ್ಚೆತ್ತ ವಿಜಯಪುರ ಜಿಪಂ ಸಿಇಒ ವಿಕಾಸ ಸುರಳಕರ ಕೂಡಲೇ ವಿಜಯಪುರ ನಗರಕ್ಕೆ ಉದ್ಯೋಗ ಅರಸಿ ಬರುವ ಹಳ್ಳಿಗರ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿದ್ದು ನೋಂದಣಿ ಕೇಂದ್ರವನ್ನೂ ತೆರೆದಿದ್ದಾರೆ.
Related Articles
ಬಸವನಬಾಗೇವಾಡಿಯಲ್ಲೂ ಕ್ರಮ
ಮತ್ತೊಂದೆಡೆ ಮಂಗಳವಾರ ಬಸವನಬಾಗೇವಾಡಿ ಪಟ್ಟಣದ ನಂದೀಶ್ವರ ದೇವಸ್ಥಾನದ ಎದುರು ಕೂಡ ಇದೇ ರೀತಿ ಕಾರ್ಮಿಕರು ಕೆಲಸಕ್ಕೆ ಅಲೆಯುವ ಸ್ಥಿತಿ ಇದ್ದು, ಸದರಿ ವರದಿಯಿಂದ ಈ ಸ್ಥಳದಲ್ಲೂ ಕಾರ್ಮಿಕರ ಹೆಸರು ನೋಂದಣಿ ಆರಂಭಿಸಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ಇಂಡಿ ನೇತೃತ್ವದಲ್ಲಿ ಸಾಮಾಜಿಕ ಪರಿಶೋಧನಾ ಸಂಯೋಜಕ ಬಸವರಾಜ ಮಾದನಶಟ್ಟಿ, ಬಿ.ಎಸ್. ಧನಶೆಟ್ಟಿ, ತಾಂತ್ರಿಕ ಸಂಯೋಜಕ ವಿ.ಆರ್. ಪಟ್ಟಣಶೆಟ್ಟಿ, ಕಾರ್ಯದರ್ಶಿ ಘೋರ್ಪಡೆ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಣ್ಣೂರು ಎಸ್.ಎಸ್. ಶೇಗುಣಸಿ, ನರಸಲಗಿ ಜೆ.ಎಂ. ಮಮದಾಪುರ, ಯರನಾಳದ ರವಿ ಗುಂಡಾಳ, ಹೂವಿನಹಿಪ್ಪರಗಿಯ ಎಂ.ಎನ್. ಕತ್ತಿ, ಕಣಕಾಲ ಬಿ.ಎಂ. ಅಂಕದ, ಮಸಬಿನಾಳ ಕಾರ್ಯದರ್ಶಿ ಶಂಕರ ಕೋಲಕಾರ, ಮುತ್ತಗಿ ಎಸ್‌ಡಿಎ ಆರ್.ಎ. ಸಿಕ್ಕಲಗಾರ ಅವರಿದ್ದ ತಂಡ ಕಾರ್ಮಿಕರ ಸಮೀಕ್ಷೆ, ನೋಂದಣಿ ಆರಂಭಿಸಿದೆ.

ಗ್ರಾಪಂನಲ್ಲಿ ಪಿಡಿಒ ಸಿಗದಿದ್ದರೂ ವಿಜಯಪುರ ನಗರದಲ್ಲಿ ನರೇಗಾ ಯೋಜನೆ ಹೆಸರು ನೋಂದಣಿ ಹಾಗೂ ಉದ್ಯೋಗ ಕಲ್ಪಿಸಲು ಪ್ರತ್ಯೇಕ ಅಧಿಕಾರಗಳ ತಂಡದೊಂದಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ. ಕೂಲಿ ಹಣ ಪಾವತಿಗೆ ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ನರೇಗಾ ನಿಯಮ ಸಡಿಲಿಸಿ 3 ದಿನಗಳಲ್ಲಿ ಎನ್‌ಎಂಆರ್ ಸಲ್ಲಿಸಲು ಸೂಚಿಸಲಾಗಿದೆ.•ವಿಕಾಸ ಸುರಳಕರ, ಜಿಪಂ ಸಿಇಒ, ವಿಜಯಪುರ ಜಿ.ಎಸ್. ಕಮತರ