Advertisement

ಕೃಷ್ಣಾ ನದಿಯಲ್ಲಿ ಮೊಸಳೆಗೆ ಮತ್ತೊಂದು ಬಲಿ

10:54 AM Jun 30, 2022 | Kavyashree |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನರಭಕ್ಷಕ ಮೊಸಳೆ ಹಾವಳಿ ಹೆಚ್ಚಾಗಿದ್ದು ಇಂದು ಮತ್ತೊಬ್ಬ ವ್ಯಕ್ತಿ ಮೊಸಳೆಗೆ ಆಹಾರವಾಗಿದ್ದಾನೆ.

Advertisement

ಮೃತನನ್ನು ಹಂಡರಗಲ್ಲ ಗ್ರಾಮದ ನಾಗಪ್ಪ ಸಂಜಿವಪ್ಪ ಉಂಡಿ (55) ಎಂದು ಗುರುತಿಸಲಾಗಿದೆ.

ಕಳೆದ ವಾರ ಇದೇ ಭಾಗದಲ್ಲಿ ಹಂಡರಗಲ್ಲ ಪಕ್ಕದ ನಾಗರಾಳ ಗ್ರಾಮದ ವ್ಯಕ್ತಿಯನ್ನು ಮೊಸಳೆ ಬಲಿ ಪಡೆದಿತ್ತು.

ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ನದಿಯಿಂದ ಹೊರ ತರಲು ಕ್ರಮ ಕೈಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನ ಅಗಲಿದ್ದಾರೆ.

ನರಭಕ್ಷಕ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾಗಿರುವ ಅರಣ್ಯ ಅಧಿಕಾರಿಗಳ ವಿರುದ್ದ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲ ಘಟನೆ ನಡೆದಾಗಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ವ್ಯಾಪಕ ಪ್ರಚಾರ, ಜಾಗೃತಿ ನಡೆಸಿದ್ದರೆ ಇಂದಿನ ಘಟನೆ ತಪ್ಪಿಸಬಹುದಿತ್ತು. ಆದರೆ ಅವರು ಡಂಗೂರ ಸಾರುವಂತೆ ಗ್ರಾ.ಪಂ.ನವರಿಗೆ ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಲು ಮುಂದಾಗಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಾಂತೇಶ ಪಟ್ಟಣದ ಮತ್ತಿತರರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next