Advertisement

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

10:59 PM May 03, 2024 | Shreeram Nayak |

ವಿಜಯಪುರ:ಜಿಲ್ಲೆಯಲ್ಲಿ 2017ರಲ್ಲಿ ನಡೆದಿದ್ದ ಗರ್ಭಿಣಿಯ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಶುಕ್ರವಾರ ವಿಜಯಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರಿಗೆ ಗಲ್ಲು ಶಿಕ್ಷೆ ವಿ ಧಿಸಿದ್ದರೆ, ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

Advertisement

2017, ಜೂನ್‌ 3ರಂದು ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಭಾನು ಅತ್ತಾರ ಎಂಬ 9 ತಿಂಗಳ ಗರ್ಭಿಣಿಗೆ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಲ್ಲಿ ಹೆತ್ತವರು, ಸಹೋದರರು ಹಾಗೂ ಬಂಧುಗಳೇ ಸೇರಿದ್ದರು.

ಭಾನು ಅತ್ತಾರ ಯುವತಿಯನ್ನು ಅದೇ ಗ್ರಾಮದ ಸಾಯಬಣ್ಣ ಉರ್ಫ್‌ ಮುದುಕಪ್ಪ ಶರಣಪ್ಪ ಕೊಣ್ಣೂರು ಎಂಬ ಯುವಕ ಮದುವೆಯಾಗಿದ್ದ. ಆದರೆ ತಮ್ಮ ಧರ್ಮ-ಜಾತಿಗೆ ಸೇರದ ಯುವಕನನ್ನು ತಮ್ಮ ಮಗಳು ಮದುವೆಯಾಗಿ ಕುಟುಂಬದ ಮಾನ ತೆಗೆದಿದ್ದಾಳೆ ಎಂಬ ಕೋಪದಲ್ಲಿ ಭಾನು 9 ತಿಂಗಳ ಗರ್ಭೀಣಿಯಾಗಿದ್ದರೂ ಮಾನವೀಯತೆ ತೋರದೆ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು.

ಸದರಿ ಪ್ರಕರಣದಲ್ಲಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಕುರಿತು ಸಾಯಬಣ್ಣ ತಾಳಿಕೋಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಬಸವನಬಾಗೇವಾಡಿ ಡಿಎಸ್ಪಿ ಪಿ.ಕೆ.ಪಾಟೀಲ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಜಯಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್ಸಿ-ಎಸ್ಟಿ ಅಪರಾಧ ವಿಭಾಗದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ ಎಲ್‌ಪಿ ಅವರು ಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ, ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಇಬ್ರಾಹಿಂಸಾಬ್‌ ಅತ್ತಾರ, ಅಕ್ಬರಸಾಬ್‌ ಅತ್ತಾರ ಸೇರಿದ್ದಾರೆ. ರಮಜಾನಭೀ ಅತ್ತಾರ, ದಾವಲಭೀ ಜಮಾದಾರ್‌, ಅಜಮಾ ದಖನಿ, ಜಿಲಾನಿ ದಖನಿ, ದಾವಲಭಿ ಧನ್ನೂರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

Advertisement

ಸದರಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇಬ್ಬರಿಗೆ ತಲಾ 49,250 ರೂ. ಹಾಗೂ ಜೀವಾವಧಿ  ಶಿಕ್ಷೆಗೆ ಗುರಿಯಾದವರಿಗೆ ತಲಾ 15 ಸಾವಿರ ರೂ. ಸೇರಿದಂತೆ ಒಟ್ಟು 4,19, 750 ರೂ. ದಂಡ ಭರಿಸಬೇಕಿದೆ. ಇದಲ್ಲದೇ ಮೃತಳ ಪತಿಗೆ ಶಿಕ್ಷೆಗೆ ಗುರಿಯಾದವರು ಸೇರಿ ಒಟ್ಟು 2.50 ಲಕ್ಷ ರೂ. ಪರಿಹಾರವನ್ನೂ ನೀಡಬೇಕು ಎಂದು ಆದೇಶಿಸಿದೆ. ಪ್ರಕರಣದ ಮೂರನೇ ಆರೋಪಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿದ್ದರಿಂದ ಬಾಲ ನ್ಯಾಯ ಮಂಡಳಿ ಎದುರು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್.ಲೋಕೂರ ವಾದ ಮಂಡಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next