Advertisement

ಹಡಗಿನಾಳ ಸೇತುವೆ ಜಲಾವೃತ

04:30 PM Jun 26, 2019 | Naveen |

ವಿಜಯಪುರ: ಡೋಣಿ ನದಿ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದ ಜನರನ್ನು ರಕ್ಷಿಸಿದ ಬೆನ್ನಲ್ಲೇ ಇದೇ ನದಿ ಜಿಲ್ಲೆಯ ಸೇತುವೆಯೊಂದನ್ನು ಸಂಪೂರ್ಣ ಮುಳುಗಿಸುವ ಮೂಲಕ ಹಲವು ಗ್ರಾಮಗಳ ಸಂಪರ್ಕ ಕಡಿತ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಹಲವು ಅವಾಂತರ ಮಾಡಿದೆ.

Advertisement

ಮಂಗಳವಾರ ತಾಳಿಕೋಟೆ ಸಮೀಪ ಹರಿಯುವ ಡೋಣಿ ನದಿ ನೆಲ ಮಟದrದಲ್ಲಿರುವ ಸೇತುವೆ ಮೇಲ್ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾರಣ ಹಡಗಿನಾಳ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ಡೋಣಿ ನದಿ ಪಾತ್ರದ ಸುತ್ತಲಿನ ನೂರಾರು ಎಕರೆ ಜಮೀನು ನೀರು ಆವರಿಸಿಕೊಂಡಿದೆ. ಡೋಣಿ ನದಿ ಪ್ರವಾಹದಿಂದ ಸೇತುವೆ ಮುಳುಗಿರುವ ಕಾರಣ ಸದರಿ ಸೇತುವೆಯನ್ನೇ ಅವಲಂಬಿಸಿರುವ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದವು.

ತಾಳಿಕೋಟೆ ತಾಲೂಕಿನ ಮೂಕಿಹಾಳ, ಹಡಗಿನಾಳ, ಹರನಾಳ, ನಾಗನೂರ, ಕಲ್ಲದೇವನಹಳ್ಳಿ, ಹಗರಗುಂಡ, ಶಿವಪುರ ಸೇರಿದಂತೆ ಹಲವು ಗ್ರಾಮಗಳು ಸೋಮವಾರ ರಾತ್ರಿಯಿಂದ ಸಂಪೂರ್ಣ ಸಂಕರ್ಪ ಕಡಿತಗೊಂಡಿದ್ದು, ಮಂಗಳವಾರ ಸಂಜೆವರೆಗೂ ಇದೇ ಪರಿಸ್ಥಿತಿ ಇತ್ತು. ಪರಿಣಾಮ ಈ ಗ್ರಾಮಗಳ ಜನರು ನಿತ್ಯದ ಕೆಲಸಗಳಿಗೆ ತಾಳಿಕೋಟೆ, ಮುದ್ದೇಬಿಹಾಳ ಸೇರಿದಂತೆ ಹೊರ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೇ ಪರದಾಡುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next