Advertisement
ವಿಜಯಪುರ: ಈ ವರ್ಷದ ಮೈಸೂರು ದಸರಾ ಮೆರವಣಿಗೆಯಲ್ಲಿ ಬಸವನಾಡಿನಿಂದ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಅವರ ಜೀವನ ಚಿತ್ರ ತೆರೆದಿಡುವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ತಮ್ಮ ಆಯುಷ್ಯದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ ವಚನಗಳ ಸಂಗ್ರಹ, ಮುದ್ರಣ, ಪ್ರಸಾರಕ್ಕಾಗಿಯೇ ಬದುಕು ಸವೆಸಿ ಕರ್ನಾಟಕದ ಮ್ಯಾಕ್ಸ್‌ಮುಲ್ಲರ್ ಎಂದೇ ಖ್ಯಾತಿ ಪಡೆದಿರುವ ಡಾ| ಹಳಕಟ್ಟಿ ಅವರ ಟ್ಯಾಬ್ಲೋ ಪ್ರದರ್ಶನಕ್ಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಲಕ್ಷ ರೂ. ಅಂದಾಜು ಪತ್ರಿಕೆಗೆ ಅನುಮೋದನೆ ಸಿಕ್ಕಿದೆ. ದಿನಕ್ಕೆ 10 ಸಾವಿರ ರೂ. ಬಾಡಿಗೆಯಂತೆ
ಟ್ಯಾಬ್ಲೋ ನಿರ್ಮಾಣಕ್ಕೆ ಬಳಸುವ ಲಾರಿ ಬಾಡಿಗೆ ಸುಮಾರು 2 ಲಕ್ಷ ರೂ. ಹಾಗೂ ಲಾರಿಗೆ ಬಾಡಿ ಬಿಚ್ಚಿ, ಜೋಡಿಸುವ ಕೆಲಸಕ್ಕೆ ಸುಮಾರು 1 ಲಕ್ಷ ರೂ., ಜಿಎಸ್‌ಟಿ ಹಾಗೂ ಇತರೆ ತೆರಿಗೆ ಸೇರಿ ಸುಮಾರು 3 ಲಕ್ಷ ರೂ., ಟ್ಯಾಬ್ಲೋ ನಿರ್ಮಾಣಕ್ಕೆ ಬಳಸುವ ಪ್ಲೈವುಡ್, ಪಿಒಪಿ, ಫೈಬರ್, ಥರ್ಮಾಕೊಲ್, ಬಣ್ಣ ಸೇರಿದಂತೆ ಇತರೆ ಎಲ್ಲ ಕಚ್ಚಾ ವಸ್ತುಗಳು ಹೀಗೆ ಎಲ್ಲ ವೆಚ್ಚ ಸೇರಿ ಈ ಟ್ಯಾಬ್ಲೋ ನಿರ್ಮಾಣಕ್ಕೆ 10 ಲಕ್ಷ ರೂ. ಅಂದಾಜು ವೆಚ್ಚ ಮಾಡಲಾಗಿದೆ. ಜಿಲ್ಲೆಯ ಚಿತ್ರ ಕಲಾವಿದ ಮಂಜುನಾಥ ಮಾನೆ ನೇತೃತ್ವದಲ್ಲಿ ಸುಮಾರು 15 ಕಲಾವಿದರ ತಂಡ ಟ್ಯಾಬ್ಲೋ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಮೈಸೂರು ನಗರದಲ್ಲಿ ಶುಕ್ರವಾರದಿಂದಲೇ ಚಟುವಟಿಕೆ ಆರಂಭಗೊಂಡಿವೆ.
Related Articles
ವಚನಗಳ ಮುದ್ರಣಕ್ಕಾಗಿ ಅನುಭವಿಸಿದ ಕಷ್ಟ, ಮುದ್ರಣದ ಬಳಿಕ ವಚನಗಳನ್ನು ಮನೆ ಮನೆ ತಲುಪಿಸಲು ಆರಂಭಿಸಿದ ನವ ಕರ್ನಾಟಕ, ಶಿವಾನುಭವ ಪತ್ರಿಕೆ ಹಾಗೂ ವಚನ ಸಂಪುಟಗಳನ್ನು ಹೊತ್ತು ತುಳಿದ ಸೈಕಲ್, ಬಳಸಿದ ವಸ್ತುಗಳು, ಮಾದರಿ ಕೂಡ ಸ್ತಬ್ಧಚಿತ್ರದಲ್ಲಿ ಪ್ರದರ್ಶನಗೊಳ್ಳಲಿವೆ.
Advertisement
ಇದಲ್ಲದೇ ಡಾ| ಫ.ಗು. ಹಳಕಟ್ಟಿ ಅವರು ವಿಜಯಪುರ ಜಿಲ್ಲೆಯಲ್ಲಿ ಅನಕ್ಷರತೆ ಹೋಗಲಾಡಿಸಿ ಅಕ್ಷರ ಬೀಜ ಬಿತ್ತಲು ಶಿಕ್ಷಣ ಕ್ರಾಂತಿಗಾಗಿ ರೂಪಿಸಿದ ಬಿಎಲ್‌ಡಿಇ ಸಂಸ್ಥೆ, ಆರ್ಥಿಕ ಸಬಲೀಕರಣಕ್ಕಾಗಿ ಜನತೆಗೆ ಸಹಕಾರಿ ರಂಗದಲ್ಲಿ ಉಳಿತಾಯದ ಬದುಕಿನ ಪಾಠ ಹೇಳಿಕೊಟ್ಟ ಶತಮಾನ ಕಂಡಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್, ಶಿಕ್ಷಣ ಪ್ರೇಮಿ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ಡಾ| ಫ.ಗು. ಹಳಕಟ್ಟಿ ಅವರ ಸಮಾಧಿ ಹೀಗೆ ಇಡಿ ಟ್ಯಾಬ್ಲೋದಲ್ಲಿ ವಚನ ಗುಮ್ಮಟ ಡಾ| ಫ.ಗು. ಹಳಕಟ್ಟಿ ಅವರು ಸಮಾಜಕ್ಕಾಗಿ ತಮ್ಮ ಬದುಕನ್ನೇ ತ್ಯಾಗದ ಮೂಲಕ ಧಾರೆ ಎರೆದಿರುವ ಸಮಗ್ರ ಚಿತ್ರಣ ತೆರೆದುಕೊಳ್ಳಲಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಚಳವಳಿ ಮೂಲಕ ವಿಶಿಷ್ಟ ಕೊಡುಗೆ ನೀಡಿದ ಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿ ಬ್ರಿಟಿಷರಿಂದಲೇ ರಾವ್ ಬಹಾದ್ದೂರ್ -ವಚನ ಗುಮ್ಮಟ ಎಂದೇ ಕರೆಸಿಕೊಂಡವರು ಡಾ| ಫ.ಗು. ಹಳಕಟ್ಟಿ. ಬಸವನಾಡಿನ ಇಂಥ ತ್ಯಾಗಮೂರ್ತಿಯ ಅಪರೂಪದ ಸ್ತಬ್ಧಚಿತ್ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ವರ್ಷ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗುಮ್ಮಟ ನಗರಿಯ ಜನತೆಯಲ್ಲಿ ಕುತೂಹಲ ಮೂಡಿಸಿದೆ.