ವಿಜಯಪುರ: ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ನಿಲ್ಲಿಸಲಿ ಬಿಡಲಿ ಅಥವಾ ಅವರೇ ತಲೆಕೆಳಗಾಗಿ ನಿಲ್ಲಲಿ ನಮಗೆ ಸಂಬಂಧವಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ಮುಂದೆ ಸರ್ಕಾರ ಏನಾಗುತ್ತೆ ಅನ್ನೋದು ನನಗೆ ಗೊತ್ತಿದೆ, ಗ್ಯಾರಂಟಿ ನಿಲ್ಲುವುದು ಗ್ಯಾರಂಟಿ ಎಂದು ಸಂಸದ ರಮೇಶ ಜಿಗಜಿಣಗಿ ಸರಕಾರದ ವಿರುದ್ಧ ಹರಿಹಾಯ್ದರು.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಮಕೃಷ್ಣ ಹೆಗಡೆಯವರಿಗೆ ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ, ನನಗೂ ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿದ್ದು, ಮುಂದೆ ಏನಾಗುತ್ತೆ ಅನ್ನೋ ಚಿತ್ರ ಮುಂದಿದೆ. ಆದರೆ ಮುಂದೆ ಏನಾಗುತ್ತದೆ ಎಂದು ನಾನು ಹೇಳಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲವೂ ನಿಲ್ಲುತ್ತವೆ ನೋಡ್ತಾ ಇರಿ. ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಕುಂಟುತ್ತಿದೆ, ಬಹಳ ದಿನ ನಿಲ್ಲೋದಿಲ್ಲ ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಆದ್ರೆ ಸರ್ಕಾರ ಹೋಗೋದು ಗ್ಯಾರಂಟಿ ಎಂದರು.
ದಲಿತರು ಸಿಎಂ ಆಗ್ತಾರೆ:
ದಲಿತ ಮುಖ್ಯಮಂತ್ರಿ ವಿಷಯ ಪುನರುಚ್ಚರಿಸಿದ ಸಂಸದ ಜಿಗಜಿಣಗಿ, ದಲಿತರು ಮುಖ್ಯಮಂತ್ರಿ ಆಗಬೇಕೆಂಬುದು ನಾನು ಸಾಯುವವರೆಗೂ ಒತ್ತಾಯ ಇದ್ದೇ ಇರಲಿದೆ. ದಲಿತರೇನು ಪಾಪ ಮಾಡಿದ್ದಾರೆ ಎಂದು ಕಿಡಿಕಾರಿದ ಜಿಗಜಿಣಗಿ, ದೇವರ ಇಚ್ಛೇ ಇದ್ದಾಗ ದಲಿತರು ಸಿಎಂ ಆಗುತ್ತಾರೆ, ಬಹಳ ಗಡಿಬಿಡಿ ಬೇಡ, ದಲಿತ ಸಿಎಂ ಆಗೋದು ನಿಶ್ಚಿತ ಎಂದರು.
Advertisement
ಮುಂದೆ ಏನಾಗುತ್ತೆ ಅನ್ನೋ ಚಿತ್ರ ಮುಂದಿದೆ:ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಮಕೃಷ್ಣ ಹೆಗಡೆಯವರಿಗೆ ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ, ನನಗೂ ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿದ್ದು, ಮುಂದೆ ಏನಾಗುತ್ತೆ ಅನ್ನೋ ಚಿತ್ರ ಮುಂದಿದೆ. ಆದರೆ ಮುಂದೆ ಏನಾಗುತ್ತದೆ ಎಂದು ನಾನು ಹೇಳಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲವೂ ನಿಲ್ಲುತ್ತವೆ ನೋಡ್ತಾ ಇರಿ. ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಕುಂಟುತ್ತಿದೆ, ಬಹಳ ದಿನ ನಿಲ್ಲೋದಿಲ್ಲ ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಆದ್ರೆ ಸರ್ಕಾರ ಹೋಗೋದು ಗ್ಯಾರಂಟಿ ಎಂದರು.
ದಲಿತ ಮುಖ್ಯಮಂತ್ರಿ ವಿಷಯ ಪುನರುಚ್ಚರಿಸಿದ ಸಂಸದ ಜಿಗಜಿಣಗಿ, ದಲಿತರು ಮುಖ್ಯಮಂತ್ರಿ ಆಗಬೇಕೆಂಬುದು ನಾನು ಸಾಯುವವರೆಗೂ ಒತ್ತಾಯ ಇದ್ದೇ ಇರಲಿದೆ. ದಲಿತರೇನು ಪಾಪ ಮಾಡಿದ್ದಾರೆ ಎಂದು ಕಿಡಿಕಾರಿದ ಜಿಗಜಿಣಗಿ, ದೇವರ ಇಚ್ಛೇ ಇದ್ದಾಗ ದಲಿತರು ಸಿಎಂ ಆಗುತ್ತಾರೆ, ಬಹಳ ಗಡಿಬಿಡಿ ಬೇಡ, ದಲಿತ ಸಿಎಂ ಆಗೋದು ನಿಶ್ಚಿತ ಎಂದರು.