Advertisement

Vijayapura: ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ಜಾಮೀನು; ಅದ್ದೂರಿ ಸ್ವಾಗತ, ಸಮ್ಮಾನ!

07:38 AM Oct 14, 2024 | Esha Prasanna |

ವಿಜಯಪುರ: ಜಾಮೀನು ಮೇಲೆ ಬಿಡುಗಡೆಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಾದ ಜಿಲ್ಲೆಯ ಪರಶುರಾಮ ವಾಘ್ಮೋರೆ ಮತ್ತು ಮನೋಹರ್‌ ಯಡವೆಯನ್ನು ಹಿಂದೂಪರ ಸಂಘಟನೆ ಮುಖಂಡರು ಸಮ್ಮಾನಿಸುವುದರೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.

Advertisement

ಬೆಂಗಳೂರಿನಲ್ಲಿ 2017ರ ಸೆ. 5ರಂದು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ, ಸಿಂದಗಿ ತಾಲೂಕಿನ ಪರಶುರಾಮ ವಾಘ್ಮೋರೆ ಅವರನ್ನು ಬಂಧಿಸಲಾಗಿತ್ತು. ಆರೂವರೆ ವರ್ಷ ಜೈಲಿನಲ್ಲಿದ್ದ ಅವರಿಗೆ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಈ ವೇಳೆ ಮಾಧ್ಯಮದವರ  ಉದ್ದೇಶಿಸಿ ಮಾತನಾಡಿದ ಹಿಂದೂಪರ ಮುಖಂಡರೊಬ್ಬರು, ಇಂದು ವಿಜಯದಶಮಿ ನಮಗೆ ಮಹತ್ವದ ದಿನ, ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಅನ್ಯಾಯವಾಗಿ ಆರು ವರ್ಷಗಳಿಂದ ಜೈಲು ಪಾಲಾಗಿದ್ದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಡವೆ ಅವರನ್ನು ಸ್ವಾಗತಿಸಿದ್ದೇವೆ.  ನಿಜವಾದ ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ, ಹಿಂದೂ ಸಂಘಟನೆಗಳ ಪರ ಕೆಲಸಗಾರರಾಗಿದ್ದ ಕಾರಣಕ್ಕೆ ಈ ವ್ಯಕ್ತಿಗಳ ಅನ್ಯಾಯವಾಗಿ ಗುರಿಯಾಗಿಸಿದ್ದಾರೆ. ಇದರಿಂದ ಈ ಆರೋಪಿಗಳ ಕುಟುಂಬ ತೊಂದರೆ ಅನುಭವಿಸುತ್ತಿದೆ.  ಈ ಅನ್ಯಾಯಕ್ಕೆ ಗಂಭೀರವಾದ ಆತ್ಮಾವಲೋಕನದ ಅಗತ್ಯವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next