Advertisement

Vijayapura; ಸರಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಹಳೆಯ ದಾಖಲೆಗಳು ನಾಶ

04:52 PM Oct 13, 2023 | Vishnudas Patil |

ವಿಜಯಪುರ : ನಗರದಲ್ಲಿರುವ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅವಘಡದಿಂದ ಆಸ್ಪತ್ರೆಯ ಸರಕಾರಿ ದಾಖಲೆಗಳು ನಾಶವಾಗಿವೆ.

Advertisement

ಜಿಲ್ಲಾ ಆಸ್ಪತ್ರೆಯ ಹಳೆಯ ದಾಖಲಾತಿಗಳನ್ನು ಸಂಗ್ರಹಿಸಿದ್ದ ಕೊಠಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು
ಅಗ್ನಿಶಾಮಕ ಸೇವೆ ಸಿಬಂದಿ ಬೆಂಕಿ‌ ನಂದಿಸಿದರೂ ಮಹತ್ವದ ದಾಖಲೆಗಳು ಸುಟ್ಟು ಬೂದಿಯಾಗಿವೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾವಿಸಿರು ಗಾಂಧಿಚೌಕ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next