Advertisement
ಗರ್ಭಿಣಿಯಾಗಿದ್ದ ಶಾರದಾ ಹೆರಿಗೆಗಾಗಿ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಗಂಡು-ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು.
Related Articles
Advertisement
ಫೆ.23 ರಿಂದಲೇ ಬಿ.ಎಲ್.ಡಿ.ಇ. ಆಸ್ಪತ್ರೆ ವೈದ್ಯರ ಸತತ 26 ದಿನಗಳ ಪ್ರಯತ್ನ ಬಳಿಕವೂ ಚಿಕಿತ್ಸೆ ಫಲಿಸದೇ ಶಾರದಾ ಮೃತಪಟ್ಟಿದ್ದಾಳೆ.
ಮೃತಳ ಅನಾಥ ಅವಳಿ ಶಿಶುಗಳನ್ನು ಬಿ.ಎಲ್.ಡಿ.ಇ. ಆರೈಕೆ ಮಾಡಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷವೇ ಶಾರದಾಳ ಸಾವಿಗೆ ಕಾರಣ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಸದರಿ ಪ್ರಕರಣದಲ್ಲಿ ಲ್ಯಾಬ್ ಟೆಕ್ನೀಸಿಯನ್ ಈರಪ್ಪ ಜಂಬಗಿ, ಸ್ಟಾಪ್ ನರ್ಸ್ ಸುರೇಖಾ, ಲಕ್ಷ್ಮೀ, ಸವಿತಾ ಎಂಬವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಮಾಸ್ತಿಹೊಳಿ ಆದೇಶ ಹೊರಡಿಸಿದ್ದಾರೆ.
ಬಾಣಂತಿ ಶಾರದಾ ಸಾವಿಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಕೆಯ ರಕ್ತದ ಗುಂಪಿನ ಬದಲಾಗಿ ಬೇರೆ ಗುಂಪಿನ ರಕ್ತ ಹಾಕಿರುವುದೇ ಕಾರಣ . ಪ್ರಕರಣದ ತನಿಖೆ ನಡೆಸಬೇಕು. ಮೃತಳ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಡೀ ಪ್ರಕರಣದ ತನಿಖೆಯ ಬಳಿಕ ಶಾರದಾಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.