ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಮತ್ತೆ ನಾಲ್ವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕಂಟೆನ್ಮೆಂಟ್ ಪ್ರದೇಶದ ಪಿ-5011 ಸೋಂಕಿತನಿಂದಲೇ ನಾಲ್ಕು ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 221 ಕ್ಕೆ ಏರಿದೆ. ಮತ್ತೊಂದೆಡೆ ಇದೇ ದಿನ 16 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದು, ಇದರೊಂದಿಗೆ ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಡಗೆಗೊಂಡವರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಹೊಸದಾಗಿ ಸೋಂಕು ದೃಢಪಟ್ಟವರನ್ನು 35 ವರ್ಷದ ವ್ಯಕ್ತಿ ಪಿ-6114, 13 ವರ್ಷದ ಬಾಲಕಿ ಪಿ-6115, 7 ವರ್ಷದ ಬಾಲಕಿ ಪಿ-6116 ಹಾಗೂ 2 ವರ್ಷದ ಹೆಣ್ಣುಮಗು ಪಿ-6117 ಸೋಂಕು ದೃಢಪಟ್ಟಿದ್ದು, ಈ ಎಲ್ಲರಿಗೂ ಸೋಂಕಿತ ಪಿ-5011 ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಮತ್ತೊಂದೆಡೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ರೋಗದಿಂದ ಗುಣಮುಖರಾಗಿ ಮನೆಗೆ ಮರಳಿದ 16 ಜನರಲ್ಲಿ 22 ವರ್ಷದ ವ್ಯಕ್ತಿ ಪಿ-3157, 20 ವರ್ಷದ ಮಹಿಳೆ ಪಿ-4603, 45 ವರ್ಷದ ವ್ಯಕ್ತಿ ಪಿ-1177, 30 ವರ್ಷದ ವ್ಯಕ್ತಿ ಪಿ-1725, 15 ವರ್ಷದ ಬಾಲಕಿ ಪಿ-1726, 12 ವರ್ಷದ ಬಾಲಕ ಪಿ-2283, 32 ವರ್ಷದ ವ್ಯಕ್ತಿ ಪಿ-2420, 35 ವರ್ಷದ ಮಹಿಳೆ ಪಿ-2842, 18 ವರ್ಷದ ಯುವಕ ಪಿ-2843, 4 ವರ್ಷದ ಬಾಲಕ ಪಿ-3151, 2 ವರ್ಷದ ಬಾಲಕ ಪಿ-3175, 68 ವರ್ಷದ ವೃದ್ಧ ಪಿ-3976, 68 ವರ್ಷದ ವೃದ್ಧ ಪಿ-3974, 40 ವರ್ಷದ ವ್ಯಕ್ತಿ ಪಿ-4581, 60 ವರ್ಷದ ವೃದ್ಧ ಪಿ-4809 ಹಾಗೂ 70 ವರ್ಷದ ವೃದ್ಧ ಪಿ-4831 ಇವರು ಕೋವಿಡ್ ರೋಗದ ಸೋಂಕಿನಿಂದ ಮುಕ್ತರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಸ್.ಪಾಟೀಲ ವಿವರಿಸಿದ್ದಾರೆ.
ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 29,275 ಜನರು ಜಿಲ್ಲೆಗೆ ಆಗಮಿಸಿದ್ದು, ಎಲ್ಲರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇದರಲ್ಲಿ 8659 ಜನರು 28 ದಿನಗಳ ಐಸೋಲೇಶನ್ ಅವಧಿ ಮುಗಿಸಿದ್ದಾರೆ. 20375 ಜನರು 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 26594 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು, 26275 ಜನರ ನೆಗೆಟಿವ್ ವರದಿ ಬಂದಿದೆ.
221 ಜನರಲ್ಲಿ ಸೋಂಕು ದೃಢಪಟ್ಟಿದ್ದು, 98 ಜನರ ವರದಿ ನಿರೀಕ್ಷೆಯಲ್ಲಿದ್ದೇವೆ. ಸೋಂಕಿತರಲ್ಲಿ ಈ ವರೆಗೆ 6 ಜನರು ಮೃತಪಟ್ಟಿದ್ದಾರೆ. 147 ಜನರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 68 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.