ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಇಬ್ಬರು ವೃದ್ಧರಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 204 ಜನರಿಗೆ ಸೋಂಕು ತಗುಲಿದ್ದು, ಮತ್ತೂಂದೆಡೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಇದೇ ದಿನ ಸೋಂಕು ಮುಕ್ತರಾಗಿ 23 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ.
ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟವರನ್ನು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ವೃದ್ಧ ಪಿ-5831 ಹಾಗೂ ಕಂಟೇನ್ಮೆಂಟ್ ಪ್ರದೇಶದ ಸಂಪರ್ಕದ ಕಾರಣ 65 ವರ್ಷದ ವೃದ್ಧ ಪಿ-5832 ಎಂದು ಗುರುತಿಸಲಾಗಿದೆ. 204 ಜನರಲ್ಲಿ ಸೋಂಕುಮುಕ್ತರಾಗಿ 131 ಜನರು ಬಿಡುಗಡೆಯಾಗಿದ್ದಾರೆ. 67 ಜನ ಸೋಂಕಿತರಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಕೋವಿಡ್ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆ ಆದವರನ್ನು 32 ವರ್ಷದ ಪಿ-4810, 35 ವರ್ಷದ ಮಹಿಳೆ ಪಿ-3153, 23 ವರ್ಷದ ಮಹಿಳೆ ಪಿ-3154, 31 ವರ್ಷದ ಪಿ-3011, 8 ವರ್ಷದ ಬಾಲಕಿ ಪಿ-4812, 19 ವರ್ಷದ ಯುವಕ ಪಿ-4813, 28 ವರ್ಷದ ಪಿ-4814, 45 ವರ್ಷದ ಪಿ-4815, 34 ವರ್ಷದ ಪಿ-4816, 45 ವರ್ಷದ ಮಹಿಳೆ ಪಿ-4817, 51 ವರ್ಷದ ಪಿ-4818, 35 ವರ್ಷದ ಪಿ-4819, 35 ವರ್ಷದ ಮಹಿಳೆ ಪಿ-4820, 39 ವರ್ಷದ ಪಿ-4823, 70 ವರ್ಷದ ವೃದ್ಧೆ ಪಿ-4824, 47 ವರ್ಷದ ಮಹಿಳೆ ಪಿ-4826, 60 ವರ್ಷದ ವೃದ್ಧೆ ಪಿ-4828, 25 ವರ್ಷದ ಮಹಿಳೆ ಪಿ-4830, 70 ವರ್ಷದ ವೃದ್ಧ ಪಿ-4834, 55 ವರ್ಷದ ಮಹಿಳೆ ಪಿ-3792, 19 ವರ್ಷದ ಯುವಕ ಪಿ-3663, 23 ವರ್ಷದ ಯುವಕ ಪಿ-4599, 31 ವರ್ಷದ ಮಹಿಳೆ ಪಿ-4602 ಇವರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್.ಪಾಟೀಲ ವಿವರಿಸಿದ್ದಾರೆ.
26,014 ವರದಿ ನೆಗೆಟಿವ್
ಜಿಲ್ಲೆಯಲ್ಲಿ ಈ ವರೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದ 26,423 ಜನರಲ್ಲಿ 26,014 ಜನರ ನೆಗೆಟಿವ್ ವರದಿ ಬಂದಿದೆ. 205 ಜನರ ಗಂಟಲು ದ್ರವ ಮಾದರಿ ನಿರೀಕ್ಷೆಯಲ್ಲಿದ್ದೇವೆ. ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತ 204 ಜನರಲ್ಲಿ 6 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 28,896 ಜನರು ಬಂದ ಬಗ್ಗೆ ವರದಿಯಾಗಿದ್ದು, ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. 8534 ಜನರು 28 ದಿನಗಳ ಐಸೋಲೇಶನ್ ಅವಧಿ ಮುಗಿಸಿದ್ದಾರೆ. 20225 ಜನರು 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.