Advertisement

ಎಂಟು ಸಾವಿರ ಸ್ಥಳದಲ್ಲಿ ಡಿಜಿಟಲ್‌ ವೀಕ್ಷಣೆ

01:26 PM Jun 26, 2020 | Naveen |

ವಿಜಯಪುರ: ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಸಮಾರಂಭವನ್ನು ಏಕಕಾಲಕ್ಕೆ 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಲು 8 ಸಾವಿರ ಸ್ಥಳಗಳಲ್ಲಿ ಡಿಜಿಟಲ್‌ ಕಾರ್ಯಕ್ರಮ ಏರ್ಪಡಿಸಿದೆ. ಇದು ಏಷ್ಯಾದ ಅತೀ ದೊಡ್ಡ ರಾಜಕೀಯ ಕಾರ್ಯಕ್ರಮವಾಗಲಿದೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರೊ| ರಾಜು ಆಲಗೂರ ಹೇಳಿದರು.

Advertisement

ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ-ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ನಿಮಿತ್ತ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಕ್ಷೇತ್ರದಲ್ಲಿ ಕೆಪಿಸಿಸಿ ಪದಗ್ರಹಣ ಸಮಾರಂಭ ಪೂರ್ವ ತಯಾರಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದು, ಇತರರಿಗೆ ಮಾದರಿಯಾಗಲಿದೆ ಎಂದರು.

ಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ, ದೇಶಕ್ಕೆ ಗಂಡಾಂತರ ಬಂದ ಸಂದರ್ಭದಲ್ಲಿ ಮಾತ್ರ ಬಳಸುವ ಕಾಯ್ದಿಟ್ಟ ನಿಧಿಯನ್ನು ಸಾಮಾನ್ಯ ಸಮಯದಲ್ಲಿಯೂ ಬಳಸಿದ ಅಪಕೀರ್ತಿಯೂ ನರೇಂದ್ರ ಮೋದಿ ಸರ್ಕಾರಕ್ಕೆ ಸಂದಿದೆ. ಇತ್ತೀಚಿನ ದಿನಗಳಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತಿದ್ದರೂ ಅದಕ್ಕೆ ಯಾವುದೇ ಕ್ರಮಗಳನ್ನು ಅನುಸರಿಸದೇ ಸಾಮಾನ್ಯ ಜನರಿಗೆ ಹೊರೆಯಾಗುತ್ತಿರುವದನ್ನು ತಡೆಗಟ್ಟಲು ಸರ್ಕಾರ ವಿಫವಾಗಿದೆ ಎಂದರು.

ಈ ಸಂದರ್ಭದಲ್ಲಿ ರಫಿಕ್‌ ಟಪಾಲ್‌, ಯುವ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಖಾದರ್‌, ಡಾ| ಮಹಾಂತೇಶ ಬಿರಾದಾರ, ತಮ್ಮಣ್ಣ ಮೇಲಿನಕೆರಿ, ಬಬಲೇಶ್ವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಪಾಟೀಲ, ಸಂಗಮೇಶ ಕಾರಜನಗಿ, ಕೆ.ಬಿ. ಪವಾರ, ಪ್ರಶಾಂತ ಝಂಡೆ, ವೀರೇಶ ಸಿಂಧೂರ, ದೇವೇಂದ್ರ ರಾಠೊಡ, ಪ್ರವೀಣ ಹೊನವಾಡ, ಹನಮಂತ ಬಡಚಿ, ರಜಗುರು ಉಳ್ಳಾಗಡ್ಡಿ, ಅಮೀನಸಾಬ ಬೀದರ, ಚಂದ್ರಶೇಖರ ಪವಾರ, ಶಿವರಾಜ ಲಗಳಿ, ಪ್ರವೀಣ ಪಾಟೀಲ, ದೀಲಿಪ ತಳವಾರ ಸೇರಿದಂತೆ ಜಾಲತಾಣ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next