Advertisement

ವಿಜಯಪುರ: ಕಾಂಗ್ರೆಸ್ ಮೇಲುಗೈ, ಖಾತೆ ತೆರೆದ ಓವೈಸಿಯ ಎಂಐಎಂ

01:47 PM Dec 30, 2021 | Team Udayavani |

ವಿಜಯಪುರ : ಜಿಲ್ಲೆಯ 6 ಪಟ್ಟಣ ಪಂಚಾಯತ್‍ಗಳ 99 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕವಾಗಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೂರು ಕಡೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದರೆ, ಒಂದು ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಎರಡು ಕಡೆಗಳಲ್ಲಿ ಅಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್-ಪಕ್ಷೇತರರು ನಿರ್ಣಾಯಕರಾಗಿದ್ದಾರೆ.

Advertisement

99 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 47 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ 34 ವಾರ್ಡ್‍ಗಳಲ್ಲಿ ಮಾತ್ರ ಗೆದ್ದಿದೆ. 5 ವಾರ್ಡ್‍ಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು, ಕೊಲ್ಹಾರ ಪಟ್ಟಣ ಪಂಚಾಯತ್ 2 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎಐಎಂಐಎಂ ಖಾತೆ ತೆರೆದಿರುವುದು ಗಮನೀಯ.

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮೂರು ಪಟ್ಟಣ ಪಂಚಾಯತ್‍ಗಳಲ್ಲಿ ನಿಡಗುಂದಿ 16 ರಲ್ಲಿ 9 ಸ್ಥಾನ, ಹಾಗೂ ಕೊಲ್ಹಾರ ಪಟ್ಟಣ ಪಂಚಾಯತ್‍ನ 17 ಸ್ಥಾನಗಳಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಎರಡು ಕಡೆ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ. 16 ಸ್ಥಾನಗಳಿರುವ ಮನಗೂಳಿ ಪಟ್ಟಣ ಪಂಚಾಯತ್‍ನಲ್ಲಿ 12 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೇರಿದ್ದು, ಕಾಂಗ್ರೆಸ್ 4 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದೊಂದೇ ಕಡೆ ಬಿಜೆಪಿ ಅಭೂತಪೂರ್ವ ವಿಜಯದೊಂದಿಗೆ ಗದ್ದುಗೆ ಏರಿರುವುದು ವಿಶೇಷ.

ಮುದ್ದೇಬಿಹಾಳ ತಾಲೂಕ ನಾಲತವಾಡ ಪಟ್ಟಣ ಪಂಚಾಯತ್‍ನಲ್ಲಿ 14 ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ನಾಲ್ವರು ಪಕ್ಷೇತರರು, ಓರ್ವ ಜೆಡಿಎಸ್ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ. ಗಮನೀಯ ಅಂಶ ಎಂದರೆ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಈ ಕ್ಷೇತ್ರದಲ್ಲಿ ಬಿಜೆಪಿ ಖಾತೆಯನ್ನೇ ತೆರತೆಯಲು ಸಾಧ್ಯವಾಗದೇ ಶೂನ್ಯ ಸಂಪಾದಿಸಿರುವುದು.

ದೇವರಹಿಪ್ಪರಗಿ ಪಟ್ಟಣ ಪಂಚಾಯತ್ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 17 ಸದಸ್ಯ ಬಲದ ಈ ಪಂಚಾಯತ್‍ನಲ್ಲಿ 7 ಸ್ಥಾನ ಗೆದ್ದಿರುವ ಕಾಂಗ್ರೆಸ್ ಅಧಿಕಾರಕ್ಕೇರಲು 4 ಸ್ಥಾನ ಗೆದ್ದಿರುವ ಜೆಡಿಎಸ್, ಮೂರುರಲ್ಲಿ ವಿಜಯ ಸಾಧಿಸಿರುವ ಪಕ್ಷೇತರ ಬೆಂಬಲ ಪಡೆಯಲೇಬೇಕಿದೆ.

Advertisement

19 ಸ್ಥಾನಗಳಿರುವ ಆಲಮೇಲ ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿ 9, ಕಾಂಗ್ರೆಸ್ 7 ಹಾಗೂ ಮೂವರು ಪಕ್ಷೇತರರು ವಿಜಯ ಸಾಧಿಸಿದ್ದಾರೆ. ಯವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಈ ಪಂಚಾಯತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ಇಬ್ಬರಲ್ಲಿ ಯಾರೇ ಅಧಿಕಾರಕ್ಕೇರಿದರೂ ಪಕ್ಷೇತರರೇ ನಿರ್ಣಾಯಕ.

Advertisement

Udayavani is now on Telegram. Click here to join our channel and stay updated with the latest news.

Next