Advertisement

ಜಿಲ್ಲಾದ್ಯಂತ ಸಂಭ್ರಮದ ಕ್ರಿಸ್‌ಮಸ್‌ಆಚರಣೆ

06:13 PM Dec 26, 2019 | Naveen |

ವಿಜಯಪುರ: ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಮಾನವತೆಯ ಮೂಲಕ ಭಾವೈಕ್ಯತೆ ಸಂದೇಶದಡಿ ಎಲ್ಲರೂ ಸಮಾನವಾಗಿ ಶಾಂತಿಯುತವಾಗಿ ಬಾಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ 23 ನೇ ವಾರ್ಡ್‌ನ ರಹಮತ್‌ ನಗರದ ಇಮ್ಯಾನ್ಯುಯೆಲ್‌ ಚರ್ಚ್‌ನಲ್ಲಿ ಕ್ರಿಸ್‌ ಮಸ್‌ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರೀತಿ, ವಿಶ್ಪಾಸ, ಸೌಹಾರ್ಧತೆಯ ಬದುಕನ್ನು ಎಲ್ಲರೂ ಅನುಸರಿಸಬೇಕು. ಹಿರಿಯರ ಆದರ್ಶಗಳನ್ನು ಪಾಲಿಸುವ ಗುಣ ಬೆಳೆಸಿಕೊಳ್ಳಬೇಕು.ಯೇಸುಕ್ರಿಸ್ತನು ಮಾನವನ ಸಂಕಷ್ಟ ಮತ್ತು ಪಾಪವನ್ನು ಪರಿಹಾರ ಮಾಡಲು, ಬಡವರ ಕಣ್ಣೀರು ಒರೆಸಲು, ನಿಸ್ವಾರ್ಥ ಸೇವೆ ಸಲ್ಲಿಸಲು ಅವತರಿಸಿದ ಮಹಾನ್‌ ಮಾನವತಾವಾದಿ ಎಂದರು.

ಈ ವೇಳೆ ಪುರಸಭಾ ಮಾಜಿ ಸದಸ್ಯ ಎಸ್‌ .ಭಾಸ್ಕರ್‌, ಗೌಸ್‌ಖಾನ್‌, ಎಂ.ಮು ನಿನಾರಾಯಣ, ಮತ್ತಿತರರು ಇದ್ದರು. ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಅದ್ದೂರಿ ಆಚರಣೆ:ಪಟ್ಟಣದ ಎಲ್ಲಾಚರ್ಚ್ಗಳಲ್ಲಿ ಅದ್ಧೂರಿಯಾಗಿ ಸಂಭ್ರಮದ ಕ್ರಿಸ್‌ ಮಸ್‌ ಹಬ್ಬವನ್ನು ಆಚರಿಸಲಾಯಿತು.

ಪಟ್ಟಣದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಾಲಯೇಸು ಕ್ರೆçಸ್ಟ್‌ ಚರ್ಚ್‌, ಮಂಡಿಬೆಲೆ ರಸ್ತೆಯಲ್ಲಿರುವ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಯೇಸುವಿನ ಪ್ರತಿಮೆಗೆ ಅಲಂಕಾರ ಮಾಡಿದ್ದು ಭಕ್ತರ ಗಮನ ಸಳೆಯಿತು. ಚರ್ಚ್‌ಗಳಿಗೆ ಕ್ರಿಸ್‌ಮಸ್‌ ಈವ್‌ ಪ್ರಯುಕ್ತ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಯೇಸುವಿನ ಬಾಲ್ಯ ಮತ್ತು ಜೀವನಚರಿತ್ರೆಯನ್ನು ಬಿಂಬಿಸುವ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Advertisement

ಯೇಸುವಿನ ಸಂದೇಶಗಳು: ಧಾರ್ಮಿಕ ಸಭೆಗಳನ್ನು ಆಯೋಜಿಸಿ ಯೇಸುವಿನ ಸಂದೇಶಗಳನ್ನು ಸಾರಲಾಯಿತು.ಬೆಳಿಗ್ಗೆಯಿಂದಲೇ ಚರ್ಚ್‌ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶಿಲುಬೆ ಮುಂದೆ ನಿಂತು ಶ್ರದ್ಧಾ ಭಕ್ತಿಯಿಂದ ಪಾದ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬಣ್ಣದ ಕಾಗದಗಳಿಂದ ಅಲಂಕಾರ: ಪಟ್ಟಣದ ಇಮ್ಮಾನುವೇಲ್‌ ಚರ್ಚ್‌, ಚಂದೇನಹಳ್ಳಿ ಗೇಟ್‌ ನಲ್ಲಿರುವ ಯೇಸು ಪ್ರೇಮಾಲಯ ಬ್ಯಾಪ್ಟಿಸ್ಟ್‌ ಚರ್ಚ್‌, ಬುಳ್ಳಹಳ್ಳಿ ಗ್ರಾಮದ ಒಳ್ಳೆಯ ಕುರುಬನ ಸಭೆ, ಇಮ್ಮಾನುಯೆಲ್‌ ಬ್ಯಾಸ್ಟಿಸ್ಟ್‌ ಚರ್ಚ್‌, ಸಿ. ಎನ್‌. ಹೊಸೂರು ಚರ್ಚ್‌, ಬಿಜ್ಜವಾರ ಗ್ರಾಮದ ಚರ್ಚ್‌ ಸೇರಿದಂತೆ ವಿವಿಧೆಡೆ ಚರ್ಚ್ಗಳ ಆವರಣಗಳನ್ನು ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು.ಬಾಲ ಯೇಸು ದೇವಾಲಯದಲ್ಲಿ ನಿರ್ಮಿಸಿದ್ದ ಯೇಸು ಜೀವನ ವೃತ್ತಾಂತದ ಗೋದಲಿಯ ಪ್ರದರ್ಶನವು ಎಲ್ಲರ ಗಮನಸೆಳೆಯಿತು.ಏಸು ಕ್ರಿಸ್ತನ ಜನ್ಮ ದಿನದ ಪ್ರಯುಕ್ತ ಶ್ರದ್ದಾ ಭಕ್ತಿಯಿಂದ ಕೇಕ್‌ ಕತ್ತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next