Advertisement

ದೇಶದ ಏಳ್ಗೆ ಮಕ್ಕಳ ಕೈಯಲ್ಲಿದೆ: ಬೆಳಗಲಿ

01:06 PM Nov 16, 2019 | Naveen |

ವಿಜಯಪುರ: ದೇಶದ ಏಳ್ಗೆ ಮಕ್ಕಳ ಕೈಯಲ್ಲಿದೆ. ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ. ದೇಶದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡಬೇಕಿದೆ ಎಂದು ಇಟ್ಟಂಗಿಹಾಳ ಎಕ್ಸಲಂಟ್‌ ಶಾಲೆ ವಿದ್ಯಾರ್ಥಿ ಪ್ರತಿನಿಧಿ ಅಭಿನಂದನ ಬೆಳಗಲಿ ಹೇಳಿದರು.

Advertisement

ಇಟ್ಟಂಗಿಹಾಳದ ಎಕ್ಸಲಂಟ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೂ ದೇಶವನ್ನು ಸುಭದ್ರವಾಗಿ ಕಟ್ಟುವ ಕನಸುಗಳಿದ್ದು, ಅವುಗಳ ಸಾಕಾರಕ್ಕೆ ಪರಿಶ್ರಮ ಅಗತ್ಯ ಎಂದರು.

ವಿದ್ಯಾರ್ಥಿ ಪ್ರತಿನಿಧಿ  ವರದಾ ನೀಲಮಣಿಗಾರ ಮಾತನಾಡಿ, ದೇಶದ ಮೊದಲ ಪ್ರಧಾನಿಯಾಗಿದ್ದ ಜವಹಾರಲಾಲ್‌ ನೆಹರು ಅವರು ಮಕ್ಕಳ ಮೇಲಿದ್ದ ತಮ್ಮ ಅಪಾರ ಪ್ರೀತಿಯನ್ನು ಮಕ್ಕಳ ದಿನಾಚರಣೆಗೆ ಮೀಸಲಿಡುವ ಮೂಲಕ ಮಕ್ಕಳಿಗೆ ವಿಶೇಷ ಗೌರವ ನೀಡಿದ್ದು, ನಾವೆಲ್ಲ ಕೃತಜ್ಞರಾಗಿರಬೇಕು. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂಬ ವಿಶ್ವಾಸ ಇರಿಸಿಕೊಂಡಿದ್ದ ನೆಹರು ಅವರು, ಮಕ್ಕಳ ದಿನಾಚರಣೆ ಮೂಲಕ ಭವಿಷ್ಯದ ನಾಗರಿಕರಲ್ಲಿ ವಿಶೇಷವಾಗಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ಸ್ನೇಹಾ ಯೆಚ್ಚಿ ಮಾತನಾಡಿ, ಮಕ್ಕಳು ತಂದೆ-ತಾಯಿ ಹಾಗೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು. ಉತ್ತಮ ಗುರಿ ಹೊಂದಿ ಸತತ ಪ್ರಯತ್ನದೊಂದಿಗೆ ಮುನ್ನಡೆಯಬೇಕು ಎಂದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀಮಂತ ಪಡಸಲಗಿ, ಪ್ರತೀಕ್ಷಾ ಗದ್ದಿಗಿಮಠ, ಅಭಿಷೇಕ ಹಡಲಸಂಗ, ಚೇತನಾ ಬಗಲಿ, ಪೂರ್ವಿ ತಳವಾರ, ಸಾಕ್ಷಿ ಹಿರೇಮಠ, ನೇಹಾ ಭುಯ್ನಾರ ಉಪಸ್ಥಿತರಿದ್ದರು.

Advertisement

ಆದರ್ಶ ನಗರ: ಮಕ್ಕಳು ಈ ದೇಶದ ಆಸ್ತಿ. ದೇಶದ ಅಭಿವೃದ್ಧಿ ಇಂದಿನ ಯುವಕರು ಮತ್ತು ಮಕ್ಕಳ ಮೇಲೆ ನಿಂತಿದೆ ಎಂದು ಅಮ್ಮನ ಮಡಿಲು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಆದರ್ಶನಗರದ ಎಕ್ಸಲಂಟ್‌ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು ಧನಾತ್ಮಕ ವಿಚಾರ ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರಿಂದ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯಾ ಬಿರಾದಾರ, ವಿಕಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ವಿಕಾಸ ಶಿಕ್ಷಣ ಸಂಸ್ಥೆ ಗೌರವ ಸದಸ್ಯ ರಾಜಶೇಖರ ಕೌಲಗಿ, ದಯಾನಂದ ಕೆಲೂರ ಮಾತನಾಡಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಂ.ಐ. ಬಿರಾದಾರ, ಮೇಲ್ವಿಚಾರಕ ಎಂ.ಎಚ್‌. ಹುಗ್ಗೇನವರ, ಜೆ.ಆರ್‌. ಗುಡ್ಡದ, ಸುಜಾತಾ ಹ್ಯಾಳದ, ಪಿ.ಬಿ. ಕೊಳಮಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next