ವಿಜಯಪುರ: ಭಾನುವಾರದ ಕರ್ಫ್ಯೂ ಬಳಿಕ ಬಂದ ರಂಜಾನ್ ಹಬ್ಬದ ದಿನವಾದ ಸೋಮವಾರ ಜನ ಸಾರಿಗೆಗೆ ಅವಕಾಶ ನೀಡಿದ್ದರೂ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕೋವಿಡ್-19 ಭಯದಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದತ್ತ ಮುಖ ಮಾಡದ ಕಾರಣ ನಿಲ್ದಾಣ ಬಿಕೋ ಎನ್ನುತ್ತಿದೆ.
ಆದರೆ ಬೆಂಗಳೂರು ನಗರಕ್ಕೆ ತೆರಳುವ ಬಸ್ ಪೂರ್ಣ ಭರ್ತಿಯಾಗಿ ತನ್ನ ಸಂಚಾರ ಆರಂಭಿಸಿವೆ. ಬೆಂಗಳೂರು ಹೊರತುಪಡಿಸಿ ಇತರೆ ಕಡೆ ಪ್ರಯಾಣಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆಗೆ ಗ್ರಾಮೀಣ ಸಾರಿಗೆ ಆರಂಭಗೊಳ್ಳದಿರುವುದೂ ಪ್ರಮುಖ ಕಾರಣ.
ಜಿಲ್ಲಾ – ತಾಲೂಕಾ ಕೇಂದ್ರಗಳಿಗೆ ಮಾತ್ರ ಸೇವೆ ಆರಂಭಿಸಿದ್ದು, ಸರ್ಕಾರದ ಸೂಚನೆ ಬಳಿಕ ಗ್ರಾಮೀಣ ಪ್ರದೇಶಕ್ಕೆ ಬಸ್ ಸಂಚಾರ ಆರಂಭಿಸುವುದಾಗಿ ಎನ್ಇಕೆಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಕಳೆದ ಎರಡು ತಿಂಗಳಿಂದ ಸಂಪೂರ್ಣ ಸೇವೆ ಸ್ಥಗಿತಗೊಳಿಸಿರುವ ರೈಲ್ವೇ ಇಲಾಖೆ, ಸೇವೆ ಮರು ಆರಂಭಕ್ಕೆ ಸರ್ಕಾರದ ಸೂಚನೆಗೆ ಕಾಯುತ್ತಿದೆ. ಹೀಗಾಗಿ ವಿಜಯಪುರ ರೈಲು ನಿಲ್ದಾಣ ಕೂಡ ಜನರಿಲ್ಲದೇ ಬಿಕೋ ಖಾಲಿ ಖಾಲಿಯಾಗಿದೆ.