Advertisement

ಜನರ ಕಕಣ್ಣೇರು ಒರೆಸಿದ್ದಾರೆ ಬಿಎಸ್‌ವೈ

12:00 PM Mar 08, 2020 | Naveen |

ವಿಜಯಪುರ: ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ನಂತರ ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ನಡೆಸಿದ ನಡೆಸಿದ ಕುಮಾರಸ್ವಾಮಿ ಕಾಲದಲ್ಲಿ ಕರ್ನಾಟಕದ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು.ಇದರಿಂದ ಬೇಸತ್ತ ಇವರ ಪಕ್ಷದ 17 ಶಾಸಕರು  ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿ ಯಡಿಯೂರಪ್ಪ ಅವರನ್ನು ಅಧಿಕಾರಕ್ಕೆ ತರುತ್ತಲೇ ಮನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಹೇಳಿದರು.

Advertisement

ಶನಿವಾರ ಸಂಜೆ ನಗರದ ದರಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ಗೋಕಳ್ಳರಿಗೆ ಅಭಯ ನೀಡಿ, ಸೂಕ್ತ ರಕ್ಷಣೆ ನೀಡಿದ್ದರು. ಮರಳು ಮಾಫಿಯಾ ಅಬ್ಬರಕ್ಕೆ ಏರಿತ್ತು ಎಂದು ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರದ ದುರಾಡಳಿತದ ಪರಿಣಾಮ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಯಿತು. ಇವರ ಅ ಧಿಕಾರದ 5 ವರ್ಷಗಳ ಕಾಲಾವಧಿಯಲ್ಲಿ ಹಿಂದೂ ಸಮುದಾಯದ 25 ಜನರ ಮಾರಣ ಹೋಮ ನಡೆದರೂ ಸಿದ್ದರಾಮಯ್ಯ ಕಣ್ಣಲ್ಲಿ ಹನಿ ನೀರು ಬರಲಿಲ್ಲ. ಅನ್ನದಾತರು ಸರಣಿ ಆತ್ಮಹತ್ಯೆ ಮಾಡಿಕೊಂಡರೂ, ವಿಠ್ಠಲ ಅರಭಾವಿ ಎಂಬ ರೈತ ವಿಧನಸೌಧಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡದರೂ ಸಿದ್ದರಾಮಯ್ಯ ಕಣ್ಣಲ್ಲಿ ಒಂದು ಹನಿ  ಣ್ಣೀರು ಸುರಿಯಲಿಲ್ಲ. ನಿಷ್ಠಾವಂತ ಎಐಎಸ್‌ ಅಧಿಕಾರಿ ಡಿ.ಕೆ. ರವಿ ಮೃತಪಟ್ಟರೂ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಒಂಚೂರು ಮನ ಕರಗಿ ಕಣ್ಣೀರು ಹಾಕಲಿಲ್ಲ ಎಂದೆಲ್ಲ ಪಟ್ಟಿ ಮಾಡಿ ಟೀಕಾ ಪ್ರಹಾರ ನಡೆಸಿದರು.

ಪರಿಣಾಮ ರಾಜ್ಯದಲ್ಲಿ ದೌರ್ಜನ್ಯ, ಹತ್ಯೆ, ಕೊಲೆ-ಸುಲಿಗೆ ಹೀಗೆ ಜನತೆ ಕಣ್ಣೀರು ಸುರಿಸುವಂತಹ ವಿದ್ಯಮಾನ ಸೃಷ್ಟಿಯಾಗಿತ್ತು. ಸಿದ್ದರಾಮಯ್ಯ ಅವರ ದುರಾಡಳಿತದ ಪರಿಣಾಮ ಅಧಿಕಾರ ಕಳೆದುಕೊಂಡರೂ ಇವರ ಕಾಂಗ್ರೆಸ್‌ ಅಪವಿತ್ರ ಮೈತ್ರಿಯ ಕಾರಣ ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಲೂ ರಾಜ್ಯ ಜನರು ಅನ್ನದಾತರು, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದರು ಎಂದು ಟೀಕಿಸಿದರು.

ರಾಜ್ಯದಲ್ಲಿ ಎರಡು ಜಿಲ್ಲೆಗೆ ಸೀಮಿತವಾದ ಅಪ್ಪ-ಮಕ್ಕಳ ಪಕ್ಷ, ಬೀದಿ ಜಗಳಕ್ಕೆ ಮಿತಿಯಾಗಿರುವ ತಾಯಿ-ಮಗನ ಪಕ್ಷ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸುವ ಬಿಜೆಪಿ ಎಂಬ ಮೂರು ಪಕ್ಷಗಳಿವೆ. ಇದರಲ್ಲಿ ರಾಜ್ಯದಲ್ಲಿ ಈಚೆಗೆ ಜರುಗಿದ ವಿಧನಸಭೆ ಉಪಚುನಾವಣೆಯಲ್ಲಿ ಬಿಜೆಪಿ 13 ಕ್ಷೇತ್ರಗಳಲ್ಲಿ ವಿಜಯ ಸಾ ಧಿಸಿದ್ದರಿಂದ ಕಾಂಗ್ರೆಸ್‌ ರಾಜ್ಯಾಧ್ಯಕ್ಷರು, ವಿಪಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ದುಸ್ಥಿತಿ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿ ಹಲವು ತಿಂಗಳಾದರೂ ನೇಮಿಸುವ ಶಕ್ತಿ ಇಲ್ಲದ ಕಾಂಗ್ರೆಸ್‌ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ ಎಂದು ಕುಟುಕಿದರು.

Advertisement

ಮುಳಗುವ ಹಡಗಿನಂತಿರುವ ಕಾಂಗ್ರೆಸ್‌ ರಾಜಕೀಯ ಕಾರಣದ ಮತಬ್ಯಾಂಕ್‌ಗಾಗಿ ಜಾತಿ ಆಧಾರಿತವಾಗಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಹಿಂದೂ-ಮುಸಲ್ಮಾನರನ್ನು ಪ್ರತ್ಯೇಕಗೊಳಿಸುವ ಸಭೆಗಳನ್ನು ಆಯೋಜಿಸುತ್ತಿದೆ. ಬಿಜೆಪಿ ದೇಶದ ಜನರನ್ನು ಬೆಸೆಯುವ ಕಾರ್ಯ ಮಾಡುತ್ತಿದ್ದು, ನಮ್ಮ ಸರ್ಕಾರ ಹಣ್ಣು ಮಾರಿ ಶಿಕ್ಷಣ ಕ್ರಾಂತಿ ಮಾಡಿದ ಹಾಜಬ್ಬ ಅವರಂಥ ಸಾಮಾನ್ಯ ಸಾಧಕನನ್ನು ಗುರುತಿಸಿ ಪದ್ಮಶ್ರೀ ನೀಡಿ ಗೌರವಿಸವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್‌. ಪಾಟೀಲ ನಡಹಳ್ಳಿ,ಸೋಮನಗೌಡ ಪಾಟೀಲ ಸಾಸನೂರ, ಆರುಣ  ಶಹಾಪುರ, ಹನುಮಂತ ನಿರಾಣಿ, ಮಾಜಿ ಸಚಿವರಾದ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next