Advertisement

ಬಬಲೇಶ್ವರ ತಾಲೂಕಲ್ಲಿ ಚಿರತೆ ಹೋಲುವ ಪ್ರಾಣಿ ಪ್ರತ್ಯಕ್ಷ

05:39 PM May 28, 2020 | Naveen |

ವಿಜಯಪುರ: ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ, ಸುತಗುಂಡಿ ಪುನರ್ವಸತಿ ಕೇಂದ್ರ ಹಾಗೂ ವಿವಿಧ ಹಳ್ಳಿಗಳಲ್ಲಿ ಚಿರತೆ ಹೋಲುವ ಪ್ರಾಣಿ ಪ್ರತ್ಯಕ್ಷವಾದ ವರದಿಯಾಗಿದ್ದು, ತಾಲೂಕಿನ ಜನರನ್ನು ಭಯಭೀತರನ್ನಾಗಿಸಿದೆ. ಈ ಗ್ರಾಮಗಳ ರೈತರಿಗೆ ಸೇರಿದ ಎಮ್ಮೆ, ಎರಡು, ಮೇಕೆ ಮೇಲೆ ದಾಳಿ ನಡೆಸಿದೆ.

Advertisement

ದಾಳಿ ನಡೆಸಿದ್ದರಿಂದ ಜಾನುವಾರುಗಳು ಚೀರಾಟ ಆರಂಭಿಸಿದವು. ಜನರು ಕೂಗಾಡ ತೊಡಗಿದರು. ಜನರ ಕಿರಿಚಾಟ ಕೇಳಿದ ಈ ಪ್ರಾಣಿ ಕಬ್ಬಿನ ಜಮೀನುಗಳಲ್ಲಿ ಪರಾರಿಯಾಗಿ, ಅಡಗಿಕೊಂಡಿದೆ ಎಂದು ದೇವರ ಗೆಣ್ಣೂರ ಗ್ರಾಮದ ಪ್ರತ್ಯಕ್ಷದರ್ಶಿ ರೈತ ಮಂಜುನಾಥ ನಾವಿ ಹೇಳಿದ್ದಾರೆ. ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದರಿಂದ ಮಮದಾಪುರ ವಲಯ ಅರಣ್ಯಾಧಿ ಕಾರಿ ಪ್ರಭು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ಮಧ್ಯೆ ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಕಾಣಿಸಿಕೊಂದ್ದು, ಚಿರತೆಯಲ್ಲ ಹೈನಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿರುವ ಪ್ರಾಣಿ ಚಿರತೆಯೋ, ಚಿರತೆಯಂತೆ ಕಾಣುವ ಕತ್ತೆಕಿರುಬ (ಹೈನಾ)ವೋ ಎಂದು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜನರಲ್ಲಿ ಮೂಡಿರುವ ಭಯ ಹೋಗಲಾಡಿಸಬೇಕಿದೆ ಎಂದು ಕರ್ನಾಟಕ ಪ್ರದೇಶ ಕಿಸಾನ್‌ ಕಾಂಗ್ರೆಸ್‌ ಸಮಿತಿ ವಿಜಯಪುರ ಜಿಲ್ಲೆ ಉಸ್ತುವಾರಿ ಜೈನಾಪುರದ ಪ್ರಶಾಂತ ದೇಸಾಯಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next