Advertisement
ಈ ಕುರಿತು ಪ್ರಕಟಣೆ ನೀಡಿರುವ ಅವರು, ನನ್ನ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶ ವಿವಿಧ ನೀರಾವರಿ ಯೋಜನೆಗಳಿಂದ ಸಂಪೂರ್ಣ ನೀರಾವರಿಗೆ ಒಳಪಡುತ್ತಿದೆ. ರೈತರಿಗೆ ನೀರಿನ ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕವೂ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. ಇದಕ್ಕೆ ತಕ್ಕಂತೆ ಬಬಲೇಶ್ವರ ಕ್ಷೇತ್ರದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ವಿದ್ಯುತ್ ಕೇಂದ್ರಗಳಿಗೆ ವಿವಿಧ ಕಡೆಗಳಿಂದ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದಿದ್ದಾರೆ.
Related Articles
Advertisement
ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಬಲೇಶ್ವರ, ಶಿರಬೂರ, ಮಮದಾಪುರ ಮತ್ತು ತಿಕೋಟಾ 110ಕೆ.ವಿ. ವಿದ್ಯುತ್ ಕೇಂದ್ರಗಳಲ್ಲಿ ಹಾಲಿಯಿರುವ 10ಎಂ.ವಿ ಟಿ.ಸಿಗಳ ಬದಲಾಗಿ ದುಪ್ಪಟ್ಟು ಸಾಮರ್ಥಯದ 20ಎಂ.ವಿ ಟಿ.ಸಿ ಅಳವಡಿಒಸುವುದಾಗಿ ತಿಳಿಸಿದ್ದಾರೆ.
220 ಕೆ.ವಿ ವಿದ್ಯುತ್ ಕೇಂದ್ರಗಳು ಹಾಗೂ 110 ಕೆ.ವಿ ವಿದ್ಯುತ್ ಕೇಂದ್ರಗಳು ಅಂತರ್ ಸಂಪರ್ಕಗೊಳ್ಳುವದರಿಂದ ಈ ಭಾಗದಲ್ಲಿ ಎಂದಿಗೂ ಸಹ ಲೋ ವೋಲೆrಜ್ ಸಮಸ್ಯೆ ಆಗುವದಿಲ್ಲ. ಅಲ್ಲದೆ ಸಂಪೂರ್ಣ ನೀರಾವರಿಗೊಳ್ಳುವ ಈ ಪ್ರದೇಶದ ರೈತ ಬಾಂಧವರಿಗೆ ಉತ್ತಮ ಗುಣಮಟ್ಟದ ವಿದ್ಯುತ್‌ನ್ನು ಸದಾ ಕಾಲ ನೀಡಲು ಅನುಕೂಲವಾಗುತ್ತದೆ. ಅಲ್ಲದೇ ಜಿಲ್ಲೆಯ ಏತ ನೀರಾವರಿ ಯೋಜನೆಗಳ ಜಾಕ್‌ವೆಲ್ಗಳಿಗೂ ಸಹ ಗುಣಮಟ್ಟದ ಮತ್ತು ವಿಶ್ವಾಸಾರ್ಹ ವಿದ್ಯುತ್ ಸದಾ ಕಾಲ ದೊರಕುತ್ತದೆ.
ನೈಸರ್ಗಿಕ ವಿಕೋಪದಂತಹ ಕಷ್ಟ ಕಾಲದಲ್ಲಿಯೂ ಸಹ ಬಹುಸಂಪರ್ಕ ವಿದ್ಯುತ್ ಮಾರ್ಗವಿರುವ ಕಾರಣ ನಿರಂತರ ವಿದ್ಯುತ್ ನೀಡಲು ಅನುಕೂಲವಾಗುತ್ತದೆ. ಈ ಎಲ್ಲ ಉದ್ದೇಶಿತ ಕಾಮಗಾರಿಗಳು ಮುಂದಿನ 3-4 ವರ್ಷಗಳಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿವೆ. ಈಗಾಗಲೇ ಕೆಲವು ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಉಳಿದವುಗಳು ವಿವಿಧ ಹಂತಗಳಲ್ಲಿ ಇರುತ್ತವೆ ಎಂದು ಸಚಿವ ಪಾಟೀಲ ಹೇಳಿದ್ದಾರೆ.
ಈ ಎಲ್ಲ ಕಾಮಗಾರಿಗಳ ಅಂದಾಜು ಮೊತ್ತ 300 ಕೋಟಿ ರೂ. ಅನುದಾನದ ಅಗತ್ಯವಿದ್ದು, ಈ ಎಲ್ಲ ಯೋಜನೆಗಳಿಗೆ ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅನುಮೋದನೆ ನೀಡಿದ್ದಾರೆ. ಅವರಿಗೆ ನನ್ನ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.