Advertisement

Vijayapura; 5ನೇ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ 81ರ ವೃದ್ಧ

11:02 AM Jun 10, 2023 | Nagendra Trasi |

ವಿಜಯಪುರ: 81ರ ಇಳಿವಯಸ್ಸಿನ ವೃದ್ಧರೊಬ್ಬರು ಐದನೇ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಯುವ ವಿದ್ಯಾರ್ಥಿ ಸಮೂಹ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಗ್ನೋ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂಎ ಪದವಿ
ಪಡೆಯುವುದಕ್ಕಾಗಿ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ.

Advertisement

ಇದನ್ನೂ ಓದಿ:WTC Final 2023: ಬ್ರಾಡ್ಮನ್-  ಬಾರ್ಡರ್‌ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್

ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಗುಡೂರು ಬಳಿಯ ಎಸ್‌.ಸಿ.ಹಳ್ಳಿ ಗ್ರಾಮದ ನಿಂಗಯ್ಯ ಒಡೆಯರ ಎಂಬ ಹಿರಿಯ ಜೀವವೇ ಈ ಶೈಕ್ಷಣಿಕ ಸಾಧನೆಗೆ ಮುಂದಾಗಿರುವ ಹಿರಿಯ ವಿದ್ಯಾರ್ಥಿ. ಗಮನೀಯ ಅಂಶ ಎಂದರೆ ನಿಂಗಯ್ಯ ಅವರು ಎಡಗೈಯಿಂದ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸರಕಾರಿ ಸೇವೆಯಿಂದ ವಯೋ ನಿವೃತ್ತಿಯಾದ ಬಳಿಕ ಓದುವ ಹವ್ಯಾಸ ಬೆಳೆಸಿಕೊಂಡ ನಿಂಗಯ್ಯ ಒಡೆಯರ, ತಮ್ಮ ಓದನ್ನು ಶೈಕ್ಷಣಿಕ ಸಾಧನೆಗೆ ಬಳಸಿಕೊಳ್ಳಲು ಮುಂದಾದರು.

ಇದಕ್ಕಾಗಿ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ
ಪದವಿ ಪಡೆದಿದ್ದಾರೆ. ಇದೀಗ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (ಇಗ್ನೋ)ದಿಂದ ಎಂಎ ಇಂಗ್ಲಿಷ್‌ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದಾರೆ. ಇದು ನಿಂಗಯ್ಯ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಎಂಬುದು ಗಮನಾರ್ಹ.

ಇಗ್ನೋ ಮೂಲಕವೇ ಅದಾಗಲೇ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೂ ಇವರಿಗೆ ಶೈಕ್ಷಣಿಕ ಓದು ಹಾಗೂ ಪರೀಕ್ಷೆ ಎದುರಿಸುವ ಹಂಬಲ ಕಡಿಮೆಯಾಗದ ಕಾರಣ ಎಂಎ ಇಂಗ್ಲಿಷ್‌ ಪರೀಕ್ಷೆ ಬರೆಯುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.

Advertisement

ವಿಜಯಪುರ ನಗರದಲ್ಲಿರುವ ಬಿಎಲ್‌ಡಿಇ ನರ್ಸಿಂಗ್‌ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೊà ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಂಎ ಪರೀಕ್ಷೆ ಬರೆಯುತ್ತಿರುವ ನಿಂಗಯ್ಯ, ತಮ್ಮ ವಯಸ್ಸಿನ ಕಾರಣಕ್ಕೆ ಇದೀಗ ಪರೀಕ್ಷಾ ಕೇಂದ್ರದಲ್ಲಿ ಆಕರ್ಷಕ ವ್ಯಕ್ತಿಯಾಗಿದ್ದು, ಮಾತ್ರವಲ್ಲ ಯುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬರೆಯುವ ಸ್ಫೂರ್ತಿ ತುಂಬುವ ಚೈತನ್ಯವಾಗಿ ಹೊರ ಹೊಮ್ಮಿದ್ಧಾರೆ. ತಮ್ಮ ಈ ಸಾಧನೆಗೆ ಪತ್ನಿಯ ಪ್ರೋತ್ಸಾಹವೇ ಕಾರಣ ಎಂದು ಹೆಮ್ಮೆಯಿಂದ ಮುಗುಳುನಗೆ ಬೀರುವ ನಿಂಗಯ್ಯ ಅವರ ಓದುವ ಹವ್ಯಾಸ, ಪರೀಕ್ಷೆ ಬರೆಯುವ ಉಮೇದು ಕಂಡು ಇಗ್ನೋ ಪ್ರಾಂತ ನಿರ್ದೇಶಕ ಡಾ|ಎ.ವರದರಾಜನ, ಸಹಾಯಕ ನಿರ್ದೇಶಕ ಡಾ|ಬಿ.ಎನ್‌ .ದೇವೇಂದ್ರ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ನಿಂಗಯ್ಯ ಅವರ ಜೀವನೋತ್ಸಾಹಕ್ಕೆ ಬಿಎಲ್‌ಡಿಇ ನರ್ಸಿಸಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ| ಶಾಲ್ಮೊನ್‌ ಚೋಪಡೆ, ಇಗ್ನೋ ಸಹ ಸಂಯೋಜಕ ಡಾ|ಸತೀಶ ನಡಗಡ್ಡಿ ಸಂತಸ ವ್ಯಕ್ತಪಡಿಸಿ, ಇಳಿವಯಸ್ಸಲ್ಲೂ ಪರೀಕ್ಷೆ ಬರೆಯುವ ಹುಮ್ಮಸ್ಸು ಕಂಡು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next