Advertisement

Vijayapura; ಅಪ್ರಾಪ್ತರು ವಾಹನ ಚಲಾಯಿಸಿದರೆ ಪಾಲಕರ ವಿರುದ್ಧ ಕ್ರಮ: ಎಸ್ಪಿ ಋಷಿಕೇಶ ಸೋನಾವಣೆ

03:13 PM Feb 01, 2024 | keerthan |

ವಿಜಯಪುರ: ಜಿಲ್ಲೆಯಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿದಲ್ಲಿ ಮಕ್ಕಳ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಋಷಿಕೇಶ ಸೋನಾವಣೆ ಎಚ್ಚರಿಸಿದ್ದು, ಹೆಚ್ಚುತ್ತಿರುವ ಅಪಘಾತ ಹಾಗೂ ಬೈಕ್ ಸವಾರರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಹನ ಚಾಲನೆ ಕಾನೂನು ಪ್ರಕಾರ ಅಪ್ರಾಪ್ತರು ಯಾವುದೇ ವಾಹನ ಚಲಾವಣೆ ಮಾಡುವಂತಿಲ್ಲ. ಅಂಥ ಪ್ರಕರಣಗಳು ಕಂಡು ಬಂದಲ್ಲಿ ವಾಹನ ಚಾಲನೆ ಮಾಡುವ ಮಕ್ಕಳ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇದಲ್ಲದೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಅಪಘಾತದ ಸಂದರ್ಭದಲ್ಲಿ ಸಾವಿಗೀಡಾದ ಸವಾರರು ಹೆಲ್ಮೆಟ್ ಧರಿಸದೇ ಇರುವುದೇ ಸಾವಿನ ಪ್ರಮಾಣ ಹೆಚ್ಚುಲು ಪ್ರಮುಖ ಕಾರಣ. ಹೀಗಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ಧಾರಣೆ ಕಡ್ಡಾಯ ಮಾಡಲಾಗಿದೆ ಎಂದರು.

ನಗರದಲ್ಲಿ ಸಂಚಾರಿ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಟ್ರಾಫಿಕ್ ಹೆಲ್ಪ್ ಲೈನ್ ಸಂಖ್ಯೆಗೆ ಟ್ರಾಫಿಕ್ ಸಮಸ್ಯೆಯಾದ ಸ್ಥಳದಲ್ಲಿನ ಫೋಟೋ, ಲೊಕೇಶನ್ ಕಳಿಸಿದರೆ ಕೂಡಲೇ ಸಮಸ್ಯೆ ಪರಿಹರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇತ್ತೀಚೆಗೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಜೈಲಿನಿಂದಲೇ ವಿಡಿಯೋ ಮಾಡಿ, ಹರಿಬಿಟ್ಟ ಪ್ರಕರಣದ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು.

Advertisement

ಜೈಲಿನೊಳಗೆ ಮೊಬೈಲ್ ಪ್ರವೇಶಿಸಿದ್ದು ಹೇಗೆ, ಮೊಬೈಲ್ ಪ್ರವೇಶಕ್ಕೆ ಅವಕಾಶ ನೀಡಿದ್ದು ಹೇಗೆ, ವಿಡಿಯೋ ಮಾಡಿರುವ ಆರೋಪಿ ಹೇಳಿದಂತೆ ಜೈಲಿನಲ್ಲಿರುವ ಸಿಸಿ ಕೆಮೆರಾಗಳ ಪರಿಶೀಲನೆ ಸೇರಿದಂತೆ ಸಮಗ್ರ ಪರಿಶೀಲನೆ ನಡೆಯುತ್ತಿದೆ ಎಂದರು.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವಂಥ ವಸ್ತುಗಳ ಪ್ರವೇಶ ತಡೆಯುವ ಕುರಿತು ಜಿಲ್ಲೆಯ ಪೊಲೀಸರು ಜೈಲಿಗೆ ಅನಿರೀಕ್ಷಿತ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಲೇ ಇದ್ದೇವೆ. ಇದೀಗ ಮೊಬೈಲ್ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ ಎಂದರು.

ಇದಲ್ಲದೇ ಜೈಲಿನಲ್ಲಿರುವ ಖೈದಿಯ ಮೇಲೆ ಹಲ್ಲೆ ನಡೆದಿದೆ ಎಂಬ ಪ್ರಕರಣದ ಕುರಿತೂ ಪ್ರತ್ಯೇಕ ಪ್ರಕರ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‍ಪಿ ಶಂಕರ ಮಾರಿಹಾಳ, ಸಿಪಿಐ ರಮೇಶ ಅವಜಿ, ಎನ್.ಎಸ್.ಜನಗೌಡರ, ಪಿ.ಎಸ್‍ಐ ಆರೀಫ್ ಮುಶಾಪುರಿ, ಪಿ.ವೈ.ಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next