Advertisement

ಆಟೋ ಮೇಲೆ ಪ್ರೆಸ್, ಶರ್ಟ್ ಮೇಲೆ ಕೆಎಸ್ಆರ್ ಟಿಸಿ ಲೋಗೋ! ವಿಜಯಪುರದಲ್ಲೊಬ್ಬ ‘ಬಹುಕಂಪನಿ ನೌಕರ’

03:49 PM Nov 16, 2020 | keerthan |

ವಿಜಯಪುರ: ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಜನರು ತಮ್ಮ ಕಾರು, ಬೈಕ್ ಗಳ ಮೇಲೆ ಪ್ರೆಸ್ ಎಂದು‌ ಬರೆಸುವುದು ಸಾಮಾನ್ಯ. ಆದರೆ ವಿಜಯಪುರ ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧ ಇಲ್ಲದವರೂ ಟಂಟಂ, ಆಟೋಗಳ ಮೇಲೂ ಪ್ರೆಸ್ ಸ್ಟಿಕ್ಕರ್ ಬಳಕೆ ಮಾಡುವುದು ಕಂಡುಬರುತ್ತಿದೆ‌.

Advertisement

ವಿಜಯಪುರ ನಗರದಲ್ಲಿ ಆಟೋ ಮೇಲೆ ತ್ರಿಟಿವಿ ಬಂಜಾರಾ- ಪ್ರೆಸ್ (3 TV Banjara PRESS) ಎಂದು ಬರೆಸಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ಹೀಗೆಕೆ ಬರೆಸಿದ್ದೀರಿ ಎಂದು ಕೇಳುತ್ತಲೇ ಆಟೋ ಚಾಲಕ ಸ್ಥಳದಿಂದ ಆಟೋ ಸಮೇತ ಚಾಲಕ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ : ಮಕ್ಕಳು, ಮಹಿಳೆಯರು ಸೇರಿ ಹನ್ನೊಂದು ಮಂದಿಯ ರಕ್ಷಣೆ

ಗಮನಾರ್ಹ ಅಂಶವೆಂದರೆ ಸದರಿ ಆಟೋ ಚಾಲಕ ಸಾರಿಗೆ ಇಲಾಖೆ ನಿಯಮದಂತೆ ಕಡ್ಡಾಯವಾಗಿ ಖಾಕಿ ಶರ್ಟ್ ಧರಿಸಿದ್ದಾನೆ. ಆದರೆ ಸದರಿ ಖಾಕಿ ಶರ್ಟ್ ಮೇಲೆ ಕರ್ನಾಟಕ ರಾಜ್ಯ ರಸ್ತೆ ಸಾರಿ ಸಂಸ್ಥೆಯ (ಕೆಎಸ್ಆರ್ ಟಿಸಿ) ಸಿಬ್ಬಂದಿ ಬಳಸುವ ಲೋಗೋ ಹಾಗೂ ಸ್ಟಿಕರ್ ಇದ್ದು, ಸಾರ್ವಜನಿಕವಾಗಿ ಪ್ರೆಸ್, ಸಾರಿಗೆ ಸಂಸ್ಥೆ ಲೋಗೋ ಬಳಕೆಗೆ ಪೊಲೀಸರು ಕಡಿವಾಣ ಹಾಕಬೇಕಿದೆ.

ಮಾಧ್ಯಮಗಳ ಮೂಲಕ ವಿಷಯ ಬೆಳಕಿಗೆ ಬರುತ್ತಲೇ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅನುಪಮ್ ಅಗರವಾಲ, ಸಂಬಂಧಿಸಿದ ಆಟೋ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next