Advertisement
ಕೊರೊನಾ ಸೋಂಕಿನಿಂದ ಗುಣಮುಖರಾದ ಅವರು ಶನಿವಾರ “ಉದಯವಾಣಿ’ಯೊಂದಿಗೆ ಮಾತನಾಡಿ, ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರು ಸ್ವಲ್ಪ ದಿನಗಳ ಕಾಲ ದೂರ ದೂರ ಇರೋಣ, ಮಾಸ್ಕ್ ಹಾಕೋಣ, ಉಸಿರಾಟ ನಿಯಂತ್ರಿಸುವ ಶ್ವಾಸಕೋಶಕ್ಕೆ ಸಂಬಂ ಧಿಸಿದ ವ್ಯಾಯಾಮ ಮಾಡೋಣ, ಹೊಲಕ್ಕೆ ಅಥವಾ ಪರಿಸರದಲ್ಲಿ ಹೋಗಿ ದೈಹಿಕ ಶ್ರಮ ಪಡೋಣ ಎನ್ನುವ ಸಂಕಲ್ಪ ತೊಡಬೇಕು ಎಂದರು. ನಮ್ಮ ದೇಹಕ್ಕೆ ಆಕ್ಸಿಜನ್ ಸಿಗಬೇಕಾದರೆ ದೈಹಿಕ ಶ್ರಮ ಮಹತ್ವದ್ದಾಗಿದೆ. ನಾವು ದೇಹವನ್ನು ಎಷ್ಟು ದುಡಿಸುತ್ತೇವೆಯೋ ಅಷ್ಟು ಶಕ್ತಿ ನಮಗೆ ಬರುತ್ತದೆ. ಇದರಿಂದ ರೋಗ ನಮ್ಮಿಂದ ದೂರ ಇರುತ್ತದೆ. ಬೆಳಗ್ಗೆ, ಸಂಜೆ ಎರಡು ಗಂಟೆ ನಿಯಮಿತವಾಗಿ ಶ್ರಮದಾಯಕ ಕೆಲಸ ಮಾಡಿದರೆ ಶ್ವಾಸಕೋಶ ಬಲಗೊಳ್ಳುತ್ತವೆ. ಆಕ್ಸಿಜನ್ ವ್ಯವಸ್ಥೆ ಸರಿಹೋಗುತ್ತದೆ. ಉಸಿರಾಟ ಏರಿಳಿತಗಳಿಲ್ಲದೆ ನಿಯಮಿತವಾಗುತ್ತದೆ ಎಂದು ಹೇಳಿದರು.
Advertisement
ಮಹಾಮಾರಿಯಿಂದ ರಕ್ಷಣೆಗೆ ಜಾಗೃತಿಯೇ ಮದ್ದು
09:17 PM May 09, 2021 | Shreeraj Acharya |
Advertisement
Udayavani is now on Telegram. Click here to join our channel and stay updated with the latest news.