Advertisement

ಮತದಾನ ಜಾಗೃತಿಗಾಗಿ ಗೋಲಗುಮ್ಮಟ ಆವರಣದಲ್ಲಿ ಜಾಥಾ

03:04 PM Apr 21, 2019 | Naveen |

ವಿಜಯಪುರ: ಲೋಕಸಭ ಚುನಾವಣೆ ಅಂಗವಾಗಿ ಏ.23ರಂದು ಜಿಲ್ಲೆಯಲ್ಲಿ ನಡೆಯಲಿರುವ ಮತದಾನದಲ್ಲಿ ಅರ್ಹ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಜಾಗೃತಿಗಾಗಿ ಸಮೂಹ ಜಾಥಾಕ್ಕೆ ಚಾಲನೆ ನೀಡಲಾಯಿತು. ಶನಿವಾರ ನಗರದ ಐತಿಹಾಸಿಕ ಗೋಲಗುಮ್ಮಟ ಆವರಣದಲ್ಲಿ ಜಾಗೃತಿ ಜಾಥಕ್ಕೆ ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಚಾಲನೆ ನೀಡಿದರು.

Advertisement

ಮೆಟ್ರಿಕ್‌ ನಂತರದ ಬಾಲಕಿಯರು ಹಾಗೂ ವೃತ್ತಿಪರ ಬಾಲಕಿಯರ ವಸತಿ ನಿಲಯಗಳ ವಿದ್ಯಾರ್ಥಿನಿಯರು, ಮತದಾನದ ಜಾಗೃತಿಗಾಗಿ ಕರಪತ್ರ ಹಂಚಿದರು. ಇದಲ್ಲದೇ ಐತಿಹಾಸಿಕ ಗೋಳಗುಮ್ಮಟದ ಮಾರ್ಗವಾಗಿ ಡಾ| ಬಿ.ಆರ್‌.
ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧೀಜಿ ವೃತ್ತದವರೆಗೆ ಜಾಥ ಮೂಲಕ ಜಾಗೃತಿ ಜಾಥಾ ನಡೆಯಿತು.

ಜಾಥಾದಲ್ಲಿ ವಿದ್ಯಾರ್ಥಿನಿಯರು ಉತ್ಸಾಹದಿಂದ
ಭಾಗವಹಿಸಿ ತಪ್ಪದೇ ಮತದಾನ ಮಾಡುವಂತೆ
ಮತದಾರರಲ್ಲಿ ಮನವಿ ಮಾಡಿದರು. ಜಾಥಾದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್‌ ನದಾಫ್‌, ಎನ್‌.ಎಸ್‌.ಭೂಸಗೊಂಡ ಸೇರಿದಂತೆ ವಸತಿ ನಿಲಯಗಳ ವಾರ್ಡನ್‌ ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next