Advertisement

ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಪಾಟೀಲ

04:54 PM Oct 23, 2019 | Naveen |

ವಿಜಯಪುರ: ಪೊಲೀಸ್‌ ಸೇವೆ ಸರ್ಕಾರಿ ವ್ಯವಸ್ಥೆಯಲ್ಲಿ ಹಾಗೂ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಕಠಿಣ ಸೇವೆ ಎನಿಸಿದೆ. ದೇಶದ ಆಂತರಿಕ ಭದ್ರತೆ ಕಾಯುವಲ್ಲಿ ಪೊಲೀಸರ ಪಾತ್ರ ಅತ್ಯಂತ ಪಾತ್ರ ವಹಿಸುತ್ತದೆ. ಹೀಗಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಕಾಪಾಡುವಲ್ಲಿ ಸಮಾಜ ಹಾಗೂ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಜಿಲ್ಲಾ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್‌ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಪೊಲೀಸ್‌ ಹುತಾತ್ಮರ ದಿನ ಅತ್ಯಂತ ಪವಿತ್ರವಾದುದು. ಅವರನ್ನು ಭಕ್ತಿ ಪೂರ್ವದಿಂದ ಸ್ಮರಿಸುವ ಅಗತ್ಯವಿದೆ. ಜೊತೆಗೆ ಸೇವಾ ನಿರತ ಪೊಲೀಸರು ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಡುತ್ತಾರೆ. ಹೀಗಾಗಿ ಸಮಾಜದ ರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಇವರ ತ್ಯಾಗಮಯಿ ಸೇವೆಯನ್ನು ನಾಗರಿಕ ಸಮಾಜದ ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕು ಎಂದು ಸಲಹೆ ನೀಡಿದರು.

ರಸ್ತೆ ಸಂಚಾರ, ಆಂತರಿಕ ರಕ್ಷಣೆ, ಅಪರಾಧ ಕೃತ್ಯಗಳು ಸೇರಿದಂತೆ ಎಲ್ಲ ರಂಗದಲ್ಲೂ ಕೂಡ ಆರಕ್ಷಕರ ನಿಸ್ವಾರ್ಥ ಸೇವೆ ಅತ್ಯಂತ ಪ್ರಮುಖವಾದುದು. ಆದ್ದರಿಂದ ಸಾರ್ವಜನಿಕರು ಆರಕ್ಷಕರೊಂದಿಗೆ ಸಹಕಾರದಿಂದ ನಡೆದುಕೊಳ್ಳಬೇಕು. ದೇಶದ ಆಂತರಿಕ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡುವ ಪೊಲೀಸರು ಸಾಂದರ್ಭಿಕವಾಗಿ ಮೃದುತ್ವ ಹಾಗೂ ಕಠಿಣ ಮನೋಭಾವ ಹೊಂದುವ ಅಗತ್ಯವೂ ಇದೆ. ಆದರೆ ಈ ಎರಡನ್ನೂ ಸಮತೋಲನ ಕಾಯ್ದುಕೊಳ್ಳುವುದು ಪೊಲೀಸರಿಗೆ ಅತ್ಯಂತ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸಮತೋಲನದ ಮನೋಭಾವ ಹೊಂದಿದ್ದಾರೆ ಎಂದರು.

ಜಿಲ್ಲೆಯ ಪೊಲೀಸ್‌ ವರಿಷ್ಠಾ ಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್‌ ಹುತಾತ್ಮರ ಸ್ಮಾರಕ ನಿರ್ಮಿಸಿರುವುದು ಯೋಚಿತ ಕಾರ್ಯ. ಸಮಾಜದಲ್ಲಿ ಜನರ ಸೇವೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹುತಾತ್ಮರಾದ ಎಲ್ಲ ಪೊಲೀಸರ ತ್ಯಾಗ-ಬಲಿದಾನವನ್ನು ಸ್ಮರಿಸುವ ಈ ದಿನ ಗೌರವ ಸೂಚಕಕ್ಕೆ ಸಾಕ್ಷಿಯಾಗಲಿದೆ ಎಂದರು.

Advertisement

ಎಸ್ಪಿ ಪ್ರಕಾಶ ನಿಕ್ಕಂ ಮಾತನಾಡಿ, ದೇಶದಲ್ಲಿ ಪ್ರಸ್ತುತ ವರ್ಷದಲ್ಲಿ 292 ಹುತಾತ್ಮರಾದ ಎಲ್ಲಾ ಪೊಲೀಸ್‌ ಪಡೆಯ ಹುತಾತ್ಮರ ಹೆಸರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಇದೇ ಸಂದರ್ಭಧಲ್ಲಿ ಪ್ರಸಕ್ತ ವರ್ಷದಲ್ಲಿ ಹುತಾತ್ಮರಾದ ಜಿಲ್ಲೆಯ ದೇವಕತೆ ಇವರ ಕುಟುಂಬದವರಿಗೆ ಸನ್ಮಾನಿಸಲಾಯಿತು. ಪೊಲೀಸ್‌ ಸ್ಮಾರಕಕ್ಕೆ ಮಾಲಾರ್ಪಣೆ, ಕವಾಯತ ತಂಡದಿಂದ 3 ಸುತ್ತು ಗುಂಡು ಹಾರಿಸಲಾಯಿತು. ಪೊಲೀಸ್‌ ಬ್ಯಾಂಡಿನ್‌ ಗೀತೆ ಮತ್ತು 2 ನಿಮಿಷಗಳ ಮೌನಾಚರಣೆ ಹಾಗೂ ಕವಾಯತ್‌ ತಂಡದ ನಿರ್ಗಮನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಎಎಸ್ಪಿ ಬಿ.ಎಸ್‌.ನೇಮಗೌಡ ಸೇರಿದಂತೆ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next