ವಿಜಯಪುರ: ವಿಜಯಪುರ ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಪ್ಲಾಜಾದಲ್ಲಿ ಈಗಾಗಲೇ ಫಾಸ್ಟಾಗ್ ಮೂಲ ಶುಲ್ಕ ಸಂಗ್ರಹ ಆರಂಭಗೊಂಡಿದೆ. ದೇಶಾದ್ಯಂತ ಡಿಸೆಂಬರ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಫಾಸ್ಟಾಗ್ ಕುರಿತು ಜಾಗೃತಿ ಕೂಡ ಆರಂಭಗೊಂಡಿವೆ.
Advertisement
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಶುಲ್ಕ ಭರಿಸಲು ವಿಜಯಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರ ವಲಯದಲ್ಲಿರುವ ಕೃಷಿ ಮಹಾವಿದ್ಯಾಲಯದ ಬಳಿ ಟೋಲ್ ಪ್ಲಾಜ್ ನಿರ್ಮಿಸಿದೆ. 2016 ಏಪ್ರಿಲ್‌ನಿಂದ ಟೋಲ್ ಸಂಗ್ರಹ ಆಗಂಭಗೊಂಡಿದ್ದು, ಪ್ರಥಮ ವರ್ಷ 10 ಮಾರ್ಗಗಳಲ್ಲಿ 2ಕ್ಕೆ ಮಾತ್ರ ಅಳವಡಿಸಿದ್ದ ಫಾಸ್ಟಾಗ್ ವ್ಯವಸ್ಥೆಯನ್ನು ಇದೀಗ ಎಲ್ಲ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿದೆ.
Related Articles
Advertisement
ಫಾಸ್ಟಾಗ್ ಸ್ಕ್ಯಾನ್ ಮಾಡುವ ಯಂತ್ರದಲ್ಲಿ ದೋಷ ಕಂಡು ಬಂದಲ್ಲಿ ಮಾನವ ಚಾಲಿತವಾಗಿ ಸ್ಕ್ಯಾನ್ ಮಾಡಲು ಕಾರ್ಯನಿರತ 2 ಹಾಗೂ ಕಾಯ್ದಿರಿಸಿದ 2 ಯಂತ್ರಗಳ ಸೇವೆಯೂ ಇದೆ. ಆದರೆ ವಿಜಯಪುರ ಟೋಲ್ ಪ್ಲಾಜಾದಲ್ಲಿ 10 ಮಾರ್ಗಗಳಲ್ಲೂ ಫಾಸ್ಟಾಗ್ ವ್ಯವಸ್ಥೆ ಇದ್ದು, ಈವರೆಗೆ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ. ಆದರೆ ಸರ್ಕಾರ ಪೂರ್ವ ತಯಾರಿ ಇಲ್ಲದೇ, ಫಾಸ್ಟಾಗ್ ತಂತ್ರಜ್ಞಾನದಲ್ಲಿ ನಕಾರಾತ್ಮಕ ಸಂಗತಿಗಳ ಕುರಿತು ಇರುವ ಅನುಮಾನಗಳಿಗೆ ಸಮಜಾಯಿಸಿ ನೀಡದೇ ಜಾರಿಗೆ ತರುತ್ತಿರುವ ಕುರಿತು ವಾಹನ ಮಾಲೀಕರು, ಚಾಲಕರು ಗೊಣಗುತ್ತಿದ್ದಾರೆ.
ಫಾಸ್ಟಾಗ್ ಕಳ್ಳತನವಾದಲ್ಲಿ ಅಥವಾ ಕಳೆದು ಹೋದಲ್ಲಿ ಮೊಬೈಲ್ ಸಿಮ್ ಕಳೆದ ಸಂದರ್ಭದಲ್ಲಿ ಸೇವೆ ಸ್ಥಗಿತಗೊಳಿಸುವ ಕುರಿತು ಇರುವ ವ್ಯವಸ್ಥೆ ಕುರಿತಾಗಲಿ, ಸದರಿ ಸೇವೆಗೆ ಕಾರುಗಳ ಮಾಲೀಕರು ಬ್ಯಾಂಕ್ ಖಾತೆ ಹಾಗೂ ಖಾಸಗಿ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಇದರ ಸುರಕ್ಷತೆ ಕುರಿತು ಸ್ಪಷ್ಟೀಕರಿಸಿಲ್ಲ.
ಸ್ಕ್ಯಾನ್ ತಾಂತ್ರಿಕ ದೋಷ, ಫಾಸ್ಟಾಗ್‌ಗೆ ಸಂಪರ್ಕ ಕಲ್ಪಿಸಿರುವ ಬ್ಯಾಂಕ್ ಖಾತೆಯಲ್ಲಿ ಶುಲ್ಕ ಭರಿಸುವಷ್ಟು ಹಣ ಇಲ್ಲದಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನಿಟಿಸಿ) ಕುರಿತು ಸೇವೆ ಸಿಗದೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಕಡಿತವಾಗುವ ಅಪಾಯದಂಥ ಸಂಗತಿಗಳ ಕುರಿತು ಪರ್ಯಾಯ ವ್ಯವಸ್ಥೆ ಇರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟೀಕರಿಸದೇ ಏಕಾಏಕಿ ಡಿಜಿಟಲೀಕರಣಕ್ಕಾಗಿ ಫಾಸ್ಟಾಗ್ ಸೇವೆ ಆರಂಭಿಸುತ್ತಿರುವ ಕುರಿತು ಸಾರ್ವಜನಿಕರಲ್ಲಿ ಬೇಸರವೂ ಇದೆ.