Advertisement

ಮತದಾನ ಹಕ್ಕು ಚಲಾಯಿಸಿ

04:15 PM Apr 06, 2019 | Naveen |

ವಿಜಯಪುರ: ಒಳ್ಳೆಯ ಸಂಸ್ಕೃತಿಕ ಪರಿಸರ, ಅನುಭವ ಹೊಂದಿದ ಶಿಕ್ಷಕರು ಮತ್ತು ಕ್ರಿಡೆಗಳು ಇದ್ದಾಗ ವಿದ್ಯಾರ್ಥಿಗಳಿಗೆ ಸುಂಸ್ಕೃತ ಶಿಕ್ಷಣ ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿನಿಯರ ಪಾಲಕರಾದ ಜಿ.ಎನ್‌. ಪಾಲ್ಕೆ ಹೇಳಿದರು.

Advertisement

ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪಾಲಕರ
ಸಭೆಯಲ್ಲಿ ಮಾತನಾಡಿದ ಅವರು ಈ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.

ಮತ್ತೋರ್ವ ಪಾಲಕರಾದ ಶ್ರೀಕಾಂತ ಕುಂದಣಗಾರ ಮಾತನಾಡಿ, ಗುರು ಹಿರಿಯರು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ
ಬೆಳೆಸಿ ದೇಶಕ್ಕೆ ಮಾದರಿ ಮಹಿಳೆಯರನ್ನು ಕೊಡುಗೆಯಾಗಿ ನೀಡುವ ಹೊಣೆಗಾರಿಕೆ ಕಾಲೇಜು ಹಾಗೂ ಉಪನ್ಯಾಸಕರ ಮೇಲಿದೆ
ಎಂದರು.

ಪ್ರಕಾಶ ಸಿಂಧೆ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯ. ಈ ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಗಾಯಕವಾಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಕ್ರೀಡೆಯಲ್ಲಿ ತನ್ನ ಪ್ರತಿಭೆ ತೋರುತ್ತಿರುವುದೇ ಇದಕ್ಕೆ ಜೀವಂತ ಸಾಕ್ಷಿ
ಎಂದರು.

ಉಪನ್ಯಾಸಕಿ ರೂಪಾ ಮೋಟಗಿ ಮಾತನಾಡಿ, ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರು ತಪ್ಪದೇ ಮತದಾನ ಮಾಡಬೇಕು. ಜೊತೆಗೆ ನಿಮ್ಮ ನೆರೆಯವರನ್ನೂ ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸುವ ಮೂಲಕ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಹಿರಿಮೆ ಎತ್ತಿ ಹಿಡಿಯಬೇಕು. ಇದಕ್ಕಾಗಿ ಈ ತಿಂಗಳ 23ರಂದು ಜಿಲ್ಲೆಯಲ್ಲಿ
ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಎಲ್ಲರೂ ಮತದಾನ ಮಾಡುವ ಮೂಲಕ ಸಂವಿಧಾನ ನೀಡಿರುವ ಹಕ್ಕನ್ನು
ಸಮರ್ಥ ಬಳಕೆ ಮೂಲಕ ನಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಕಿವಿ ಮಾತು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ| ಆರ್‌. ಎಂ. ಮಿರ್ದೆ ಮಾತನಾಡಿ, ಪ್ರತಿ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ವಿಶೇಷ ಕಾಳಜಿ ತೋರಬೇಕು. ಇದಕ್ಕಾಗಿ ನಿತ್ಯವೂ ಕನಿಷ್ಠ
ಅರ್ಧ ಗಂಟೆ ಕಾಲೇಜಿನಲ್ಲಿ ನಡೆದ ವಿಷಯ ಕುರಿತು ನಿಮ್ಮ ಮಕ್ಕಳೊಂದಿಗೆ ಚರ್ಚಿಸಬೇಕು ಎಂದರು. ಮಲ್ಲಿಕಾರ್ಜುನ ಪಾಟೀಲ, ವೀರೇಶ ರಾಠೊಡ ಮಾತನಾಡಿದರು. ಪಿ.ಎಚ್‌. ಹೂಗಾರ, ರೇಖಾ ಮಳಲಿಮಠ, ಕಲ್ಪನಾ ಅಂಬರಕರ, ಸುಜಾತಾ ತೆಲಕರ, ವಿದ್ಯಾರ್ಥಿನಿಯರ ಪ್ರತಿನಿ ಧಿ ಕವಿತಾ ಬೀರಕಬ್ಬಿ
ವೇದಿಕೆಯಲ್ಲಿದ್ದರು.

ಪ್ರೊ| ಐ.ಎಸ್‌. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರೊ| ಜೆ.ಎಂ. ಬಿರಾದಾರ ಸ್ವಾಗತಿಸಿದರು. ಡಾ| ಆರ್‌.ಜಿ. ಕಮತರ
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next