Advertisement

ವಿಜಯಪುರ : ಸಾಲಭಾದೆಯಿಂದ ಮನನೊಂದ ರೈತ ಆತ್ಮಹತ್ಯೆ

04:23 PM Oct 14, 2019 | Suhan S |

ವಿಜಯಪುರ: ಸಾಲಭಾದೆಯ ಒತ್ತಡವನ್ನು ತಡೆಯಲಾರದೆ ರೈತನೊಬ್ಬಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.

Advertisement

ನಿಂಗಪ್ಪ ಬಸಪ್ಪ ದುದ್ದಗಿ (49) ಎಂಬ ರೈತ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ. 12 ರಂದು ಮಧ್ಯರಾತ್ರಿ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ  ನಿಂಗಪ್ಪ ಬಸಪ್ಪ ದುದ್ದಗಿ ಮೃತ ದೇಹ ಇಂದು ಮೋರಟಗಿ ಕಾಲುವೆ ದಡದಲ್ಲಿ ಪತ್ತೆಯಾಗಿದೆ.

ಮೃತ ರೈತ ನಿಂಗಪ್ಪ 6 ವರ್ಷದ ಹಿಂದೆ ಮೋರಟಗಿ ಬ್ಯಾಂಕ್ ಆಫ್ ಮಾಹಾರಾಷ್ಟ ದಲ್ಲಿ 6 ಲಕ್ಷ ರೂ. ಮತ್ತು ಗಬಸಾವಳಗಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದ. ಆದರೆ ಕಳೆದ 3 ವರ್ಷಗಳಿಂದ ಮಳೆ ಇಲ್ಲದೇ ಭೀಕರ ಬರ ಆವರಿಸಿದ್ದು ಬ್ಯಾಂಕ್ ಸಾಲ ದ್ವಿಗುಣ ವಾಗಿತ್ತು.  ಸಾಲ ತೀರಿಸಲು ಹಣ ಹೊಂದಿಸಲು ಯತ್ನಿಸಿದರೂ ಎಲ್ಲಿಯೂ ಹಣ ಹೊಂದಾಣಿಕೆ ಆಗಿರಲಿಲ್ಲ. ಅಲ್ಲದೇ ಕುಟುಂಬ ನಿರ್ವಹಣೆಯೂ ಕಷ್ಟವಾಗಿದ್ದು. ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ನಿಂಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಕೃಷಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತನಿಗೆ ಪತ್ನಿ ಬಸಮ್ಮ (35) ಮತ್ತು ಮಗ ಬಸವರಾಜ (16) ಅವಲಂಬಿತರಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next