ಕಾನಾಹೊಸಹಳ್ಳಿ (ವಿಜಯನಗರ) : ರಸ್ತೆ ಡಿವೈಡರ್‌ಗೆ ಕಂಟೇನರ್ ಲಾರಿ ಗುದ್ದಿ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಮೇ. 16ರ ಗುರುವಾರ ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದೆ.
ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿತು. ಬೆಂಕಿ ಹೊತ್ತಿ ಉರಿದಿದ್ದು, ಲಾರಿಯಲ್ಲಿದ್ದ ಚಾಲಕ, ಸಹ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ.
ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
ಸಮಯಕ್ಕೆ ಸರಿಯಾಗಿ ಬಾರದ ಅಗ್ನಿಶಾಮಕ ವಾಹನ
ಲಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಹೆದ್ದಾರಿ ಸಹಾಯಕರ ಬಳಗದ ಸದಸ್ಯರು ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೂಡಲೇ ಕೂಡ್ಲಿಗಿಯ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಕೂಡ್ಲಿಗಿಯಲ್ಲಿ ಒಂದೇ ಅಗ್ನಿಶಾಮಕ ವಾಹನವಿದ್ದು, ಅದು ಕೂಡ ಕೆಟ್ಟು ಹೋಗಿದ್ದರಿಂದ ಕೊಟ್ಟೂರಿನಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದಾರೆ.
ಒತ್ತಾಯ
ಕೂಡ್ಲಿಗಿ ತಾಲೂಕು ಬಹು ದೊಡ್ಡ ತಾಲೂಕು ಆಗಿದ್ದರಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ 50 ಸುಮಾರು 50 ಕಿಲೋಮೀಟರ್ ಹಾದು ಹೋಗಿದ್ದು,ಕಾನಾಹೊಸಹಳ್ಳಿಗೆ ಒಂದು ಅಗ್ನಿಶಾಮಕ ಠಾಣೆ ಬೇಕೆಂದು ಹಲವು ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸಿದರೂ ಈವರೆಗೂ ಪ್ರಯೋಜನವಾಗಿಲ್ಲ.