ಬೆಂಗಳೂರು : ವಿಜಯನಗರ ಮಹಾನಗರ ಪಾಲಿಕೆಯ 35 ವಾರ್ಡ್‍ಗಳು ಸೇರಿದಂತೆ ನಾನಾ ಕಾರಣಗಳಿಂದ ತೆರವಾದ ನಗರ ಸ್ಥಳೀಯ ಸಂಸ್ಥೆಗಳ 24 ಖಾಲಿ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ.
ನಗರಸಭೆಗಳ 13, ಪುರಸಭೆಯ 9 ಹಾಗೂ ಪಟ್ಟಣ ಪಂಚಾಯ್ತಿಯ 2 ವಾರ್ಡ್‍ಗಳಿಗೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ.
ಅ.10ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅ.17ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನ. ಅ.20 ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ.
ಅ.28ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದರೆ ಅ.30ರಂದು ನಡೆಯಲಿದ್ದು, ಮತ ಎಣಿಕೆಯು ಅ.31ರಂದು ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.
ನಗರಸಭೆಗಳಾದ ಅರಸೀಕೆರೆಯ 6 ವಾರ್ಡ್, ಕೊಳ್ಳೆಗಾಲದ 7ವಾರ್ಡ್, ಹರಿಹರ, ಮುಳುಬಾಗಿಲು ಹಾಸನದ ಒಂದು ವಾರ್ಡ್‍ಗೆ ಉಪ ಚುನಾವಣೆ ನಡೆಯಲಿದೆ.
ಪುರಸಭೆಗಳಾದ ಸದಲಗಾ 4ವಾರ್ಡ್‍ಗಳಿಗೆ, ರಾಮದುರ್ಗಾ, ಸವಣೂರು, ಚಿಂಚೋಳಿ, ಚಿತ್ತಾಪುರ, ನಾಗಮಂಗಲದ ತಲಾ ಒಂದು ವಾರ್ಡ್‍ಗೆ ಹಾಗೂ ಪಟ್ಟಣ ಪಂಚಾಯ್ತಿಗಳಾದ ಸಿರಿವಾರ ಮತ್ತು ಕಲಘಟಗಿಯಲ್ಲಿ ತಲಾ ಒಂದು ವಾರ್ಡ್‍ಗೆ ಉಪ ಚುನಾವಣೆ ಘೋಷಣೆಯಾಗಿದೆ.
ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ : ಭೌತಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ