Advertisement

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ

02:26 PM Oct 16, 2021 | Team Udayavani |

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ ಚಿಕ್ಕಮಗಳೂರು: ವಿಜಯದಶಮಿ ಅಂಗವಾಗಿ ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ ವಿಜೃಂಭಣೆಯಿಂದ ನಡೆಯಿತು.

Advertisement

ಗ್ರಾಮದ ಪಾಟೀಲರ ವಂಶಸ್ಥ ಮತ್ತು ಜಿಪಂ ಮಾಜಿ ಅಧ್ಯಕ್ಷ ಎ.ಎನ್‌. ಮಹೇಶ್‌ ನೇತೃತ್ವದಲ್ಲಿ 24ನೇ ವರ್ಷದ ಅಂಬು ಮಹೋತ್ಸವ ಸಾಂಪ್ರದಾಯಿಕ ಪೂಜಾ ವಿಧಿ- ವಿಧಾನಗಳೊಂದಿಗೆ ನೆರವೇರಿತು. ಶುಕ್ರವಾರ ಗ್ರಾಮಸ್ಥರು ಗ್ರಾಮದೇವರ ಮೂರ್ತಿಯನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸುವ ಮೂಲಕ ಅಂಬು ಹೊಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡ ಎ.ಎನ್‌. ಮಹೇಶ್‌ ಕುಟುಂಬಸ್ಥರು, ಗ್ರಾಮದ ಮುಖಂಡರು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಹೊಡೆಯುವ ದೊಡ್ಡಕೆರೆ ಬಳಿಗೆ ಮೆರವಣಿಗೆಯನ್ನು ಕರೆತರಲಾಯಿತು.

ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ, ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲಕ ಅಂಬು ಹೊಡೆಯುವ ಉತ್ಸವ ಯಶಸ್ವಿಗೊಳಿಸಿದರು. ಎ.ಎನ್‌. ಮಹೇಶ್‌ ಮಾತನಾಡಿ, ರಾಜಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುತ್ತಿದ್ದ ಪಾಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ಅದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ತಮ್ಮ ಕುಟುಂಬದ ಪೂರ್ವಜರು ಪಾಟೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್‌ ಮಾತನಾಡಿ, ದಸರಾ ಕಾರ್ಯಕ್ರಮವು ಇಡೀ ಗ್ರಾಮಸ್ಥರನ್ನು ಒಗ್ಗೂಡಿಸಿ, ಐಕ್ಯತೆ ಮೂಡಿಸುವ ಮೂಲಕ ಸಾಮರಸ್ಯ ಭಾವನೆ ಬೆಳೆಸಲಿದೆ ಎಂದರು.

ಕೋವಿಡ್‌ ಹಿನ್ನಲೆಯಲ್ಲಿ ಸರಳ ಹಾಗೂ ಸಂಭ್ರಮದಿಂದ ದಸರಾ ಆಚರಣೆ ಮಾಡಲಾಗುತ್ತಿದ್ದು, ಶ್ರೀ ದುರ್ಗಾಮಾತೆ ಸಂಕಷ್ಟದಲ್ಲಿರುವ ಜನತೆಯನ್ನು ಕಾಪಾಡುವ ಮೂಲಕ ಸರ್ವರಿಗೂ ಒಳಿತು ಮಾಡಲಿ ಎಂದು ಆಶಿಸಿದರು.

Advertisement

ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಾಚಾರ್‌, ಗ್ರಾಮಸ್ಥರಾದ ಎ.ಎನ್‌. ಸತ್ಯನಾರಾಯಣ, ಸಣ್ಣೇಗೌಡ, ಶಿವಣ್ಣ, ಪಾಪೇಗೌಡ, ಎ.ಬಿ. ನಾಗರಾಜ್‌, ಎ.ವಿ. ನಾಗರಾಜ್‌, ಎ.ಬಿ.ನಟರಾಜ್‌, ನಿಂಗಪ್ಪ, ಎ.ಎಂ. ಚಂದ್ರೇಗೌಡ, ಎ.ಡಿ. ನಂಜೇಗೌಡ, ಶಿವಾನಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next