Advertisement

ವಿಜಯಪುರ ಜಿಲ್ಲೆಯಲ್ಲಿ ಮಳೆ ಅವಾಂತರ : 25 ಮನೆಗಳಿಗೆ ಹಾನಿ, 3 ಜಾನುವಾರು ಬಲಿ

04:23 PM May 20, 2022 | Team Udayavani |

ವಿಜಯಪುರ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರ ಅವಾಂತರ ಆರಂಭಿಸಿದೆ. ಶುಕ್ರವಾರ ಬೆಳಗಿನ ವರೆಗೆ ಒಂದೇ ದಿನ 39.06 ಎಂ.ಎಂ. ಮಳೆ ಸುರಿದಿದ್ದು, ಜಿಲ್ಲೆಯಾದ್ಯತ 25 ಮನೆಗಳು ಹಾನಿಯಾಗಿದ್ದು ಸಿಡಿಲಿಗೆ ಎರಡು 2 ಹಾಗೂ ವಿದ್ಯುತ್ ಅವಗಡದಲ್ಲಿ ಒಂದು ಜಾನುವಾರು ಬಲಿಯಾಗಿವೆ. ಬಾಳೆ ಸೇರಿದಂತೆ ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆ ಹಾನಿಹಾಗಿವೆ.

Advertisement

ಗುರುವಾರ ಮಧ್ಯಾಹ್ನದಿಂದ ಸುರಿಯಲು ಆರಂಭಿಸಿರುವ ಮಳೆ, ಶುಕ್ರವಾರ ಬೆಳಗಿನ ವರೆಗೆ ಒಂದೇ ದಿನ 39.06 ಮಿ.ಮೀ. ಮಳೆಯಾಗಿದೆ. ಕೊಲ್ಹಾರ ತಾಲೂಕಿನಲ್ಲಿ ಅತ್ಯಧಿಕ 79.4 ಮಿ.ಮೀ. ರಷ್ಟು ಮಳೆಯಾಗಿದ್ದರೆ, ಬಬಲೇಶ್ವರ ತಾಲೂಕಿನಲ್ಲಿ 55.7 ಮಿ.ಮೀ. ಮಳೆಯಾಗಿದೆ. ವಿಜಯಪ[ಉರ ತಾಲೂಕಿನಲ್ಲಿ 41.20 ಮಿ.ಮೀ., ಇಂಡಿ ತಾಲೂಕಿನಲ್ಲಿ 22.34 ಮಿ.ಮೀ., ತಾಳಿಕೋಟೆ ತಾಲೂಕಿನಲ್ಲಿ 33.35 ಮಿ.ಮೀ., ತಿಕೋಟಾ ತಾಲೂಕಿನಲ್ಲಿ 59.75 ಮಿ.ಮೀ., ನಿಡಗುಂದಿ ತಾಲೂಕಿನಲ್ಲಿ 36.10 ಮಿ.ಮೀ., ಮುದ್ದೇಬಿಹಾಳ ತಾಲೂಕಿನಲ್ಲಿ 33.45 ಮಿ.ಮೀ., ಸಿಂದಗಿ ತಾಲೂಕಿನಲ್ಲಿ 16.40 ಮಿ.ಮೀ., ಬಸವನಬಾಗೇವಾಡಿ ತಾಲೂಕಿನಲ್ಲಿ 28.03 ಮಿ.ಮೀ., ಚಡಚಣ ತಾಲೂಕಿನಲ್ಲಿ 43.10 ಮಿ.ಮೀ., ದೇವರಹಿಪ್ಪರಗಿ ತಾಲೂಕಿನಲ್ಲಿ 19 ಮಿ.ಮೀ. ರಷ್ಟು ಮಳೆಯಾಗಿದೆ.

ಕಳೆದ ಎರಡು ದಿನಗಳಿಂದ ಸುತಿಯುತ್ತಿರುವ ಮಳೆ ಇದೀಗ ಅವಾಂತರ ಸೃಷ್ಟಿಸಲು ಆUರಂಭಿಸಿದೆ. ಗುರುವಾರವೂ ಮಳೆಯಾಗಿದ್ದರೂ 9.94 ರಷ್ಟು ಸುರಿದಿದ್ದ ಮಳೆ ಯಾವ ಹಾನಿಯನ್ನೂ ಮಾಡಿರಲಿಲ್ಲ. ಆದರೆ ಶುಕ್ರವಾರ ಸುರಿದ ಮಳೆ ಹಾನಿ ಸೃಷ್ಟಿದೆ.

ಮಳೆಯ ಅವಾಂತರಕ್ಕೆ ಬಸವನಾಗೇವಾಡಿ ತಾಲೂಕಿನಲ್ಲಿ 5 ಮನೆಗಳು, ಬಬಲೇಶ್ವರ ತಾಲೂಕಿನಲ್ಲಿ 4, ಮುದ್ಧೇಬಿಹಾಳ ತಾಲೂಕಿನಲ್ಲಿ 9, ಕೊಲ್ಹಾರ ತಾಲೂಕಿನಲ್ಲಿ 2, ತಾಳಿಕೋಟೆ, ತಿಕೋಟಾ ತಾಲೂಕಿನಲ್ಲಿ ತಲಾ 1 ಮನೆ ಸೇರಿ ಒಂದೇ ದಿನ 25 ಮನೆಗಳು ಹಾನಿಹಾಗಿದೆ.

Advertisement

ಇದನ್ನೂ ಓದಿ : ಕೆಎಸ್ಆರ್ ಟಿಸಿ ಬಸ್ ಮೇಲೆ ಬಿದ್ದ ವಿದ್ಯುತ್ ತಂತಿ; ತಪ್ಪಿದ ಭಾರೀ ಅನಾಹುತ

ತಾಳಿಕೋಟೆ ತಾಲೂಕ ಸಾಲವಾಡಗಿ ಗ್ರಾಮದಲ್ಲಿ ಬಸನಗೌಡ ಹೊರಗಿನಮನಿ ಎಂಬವರಿಗೆ ಸೇರಿದ ಆಕಳು ವಿದ್ಯುತ್ ಅವಗಡದಿಂದ ಸಾವಿಗೀಡಾಗಿದೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಮದಲ್ಲಿ ಮಹಾಂತರಪ್ಪ ಹುಮನಾಬಾದಿ ಎಂಬವರಿಗೆ ಸೇರಿದ 1.20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಹಾನಿಯಾಗಿದೆ.

ಈ ಮಧ್ಯೆ ಶಾಪೇಟೆ ಸೇರಿದಂತೆ ನರಗದ ವಿವಿಧ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಹಾನಿ ಉಂಟು ಮಾಡಿದೆ. ಮಳೆ ನೀರಿನಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ದೇವಾನಂದ ಚವ್ಹಾಣ ಅವರು ಮಹಾನರ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾನಿಯಾದ ಪ್ರದೇಶಗಳಲ್ಲಿ ಪರಿಶೀಲಿನೆ ನಡೆಸಿದರು.

ಮಹಾನಗರ ಪಾಲಿಕೆಯ ಇಇ ರಶ್ಮಿ ಮೂಲಗಾಂವಿ, ಎಇಇ ಸುನಿಲ ಹಿರೇನಿ, ಸುರೇಶ ಕುಂಬಾರ, ಪ್ರಶಾಂತ ಜಾಲಗೇರಿ, ಶಿವು ಹಿರೇಕುರುಬರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ ಜಿಲ್ಲಾಡಳಿತ ಎಚ್ಚೆತ್ತಿದ್ದು, ಬಾಧಿತರ ನೆರವಿಗೆ ಧಾವಿಸಲು ಮುಂದಾಗಿದೆ. ಮನೆ, ಬೆಳೆ, ಪ್ರಾಣಿ ಹಾನಿ ಸೇರಿದಂತೆ ವಿವಿಧ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next